Ad imageAd image

ಅದ್ದೂರಿ ಸಂಭ್ರಮದ ಸದಲಗಾ ಮೊಹರಂ ಹಬ್ಬಕ್ಕೆ ಕೊನೆ!!

Bharath Vaibhav
ಅದ್ದೂರಿ ಸಂಭ್ರಮದ ಸದಲಗಾ ಮೊಹರಂ ಹಬ್ಬಕ್ಕೆ ಕೊನೆ!!
WhatsApp Group Join Now
Telegram Group Join Now

   ——————————————–ಸಾವಿರಾರು ಭಕ್ತರ ಮಧ್ಯೆ 60ಕ್ಕೂ ಅಧಿಕ ಪಂಜಾಪೀರಗಳ ವಿಸರ್ಜನೆ

ನಿಪ್ಪಾಣಿ: ಮುಸ್ಲಿಮರಿಗಿಂತ ಅಧಿಕ ಸಂಖ್ಯೆಯಲ್ಲಿ ಹಿಂದುಗಳ ಸಹಭಾಗಿತ್ವದಲ್ಲಿ ಅತ್ಯಂತ ಅದ್ದೂರಿಯಿಂದ ಆಚರಿಸುವ ಮೊಹರಂ ಹಬ್ಬದ ಕೊನೆಯ ದಿನ ಸದಲಗಾ ಪಟ್ಟಣದಲ್ಲಿ ರವಿವಾರ 60ಕ್ಕೂ ಅಧಿಕ ಪಂಜಾಗಳ ಭವ್ಯ ಮೆರವಣಿಗೆಯೊಂದಿಗೆ ವಿಸರ್ಜಿಸಲಾಯಿತು. ಸಾವಿರಾರು ಭಕ್ತರು ವಿವಿಧ ವಾದ್ಯಗಳ ಮಧ್ಯೆ ಕೊಬ್ಬರಿ ಖಾರಿಕ್ ಭಂಡಾರ ಹಾರಿಸಿ ಅತ್ಯಂತ ಆನಂದೋತ್ಸವದಲ್ಲಿ ಮೊಹರಂ ಹಬ್ಬಕ್ಕೆ ವಿದಾಯ ಹೇಳಿದರು.

ಮಧ್ಯಾಹ್ನ ಪಟ್ಟಣದ ಚಿಕ್ಕ ವಸತಿ, ದೊಡ್ಡ ವಸತಿ, ಗಾಂಧಿ ವೃತ, ಅಂಬೇಡ್ಕರ್ ನಗರ, ದರ್ಗಾ ಚೌಕ್ ಚಾವಡಿಗಲ್ಲಿ ,ಹಳೆ ಮಾರುಕಟ್ಟೆಗಳ ಮುಖಾಂತರ ಪಂಜಾಗಳ ಮೆರವಣಿಗೆ ಹೊರಡಿಸಲಾಗಿತ್ತು. ಮೆರವಣಿಗೆಯಲ್ಲಿ ಪಂಜಾಪೀರ್ ಗಳ ಪರಸ್ಪರ ಭೇಟಿಗಳ ದೃಶ್ಯ ಭಕ್ತರನ್ನು ಭಕ್ತಿ ಲೋಕಕ್ಕೆ ಕರೆದೊಯ್ಯುವಂತಿತ್ತು. ಅದೇ ರೀತಿ ಹಜರತ್ ಶಮನಾಪೀರ ದರ್ಗಾದಲ್ಲಿ ಹರಕೆ ಪೂರೈಸಲು ಹಾಗೂ ದರ್ಶನಕ್ಕಾಗಿ ಬೃಹತ್ ಸರದಿಯಲ್ಲಿ ಭಕ್ತರು ಜನದಟ್ಟನೆ ಮಾಡಿದ್ದರು.

ಗಡಿ ಭಾಗದಲ್ಲಿಯೇ ಸದಲಗಾ ಮೊಹರಂ ಹಬ್ಬ ಪ್ರಸಿದ್ಧವಾಗಿದ್ದು ಸದರಿ ಹಬ್ಬದಲ್ಲಿ ಹಿಂದೂ ಮುಸ್ಲಿಮರು ಭೇದ ಭಾವ ಮರೆತು ಐಕ್ಯತೆಯನ್ನು ಮೆರೆಯುತ್ತಾರೆ. ಇದರಿಂದಾಗಿ ಸದಲಗಾ ಮೊರಂ ಹಬ್ಬಕ್ಕೆ ಅತ್ಯಂತ ಮಹತ್ವವೆನಿಸಿದೆ ರವಿವಾರ ಭಂಡಾರ ಹಾರಿಸುವ ಮುಖಾಂತರ ಪರಂಪರೆಯ ಪೀರ್ ಪಂಜಾಗಳ ವಿಸರ್ಜನೆ ಯೊಂದಿಗೆ ಮೊಹರಂ ಹಬ್ಬಕ್ಕೆ ತೆರೆ ಬಿದ್ದಿದ್ದು ಪ್ರಸಕ್ತ ವರ್ಷ 60ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪೀರ್ ಪಂಜಾ ಗಳನ್ನು ಪ್ರತಿಷ್ಠಾಪಿಸಲಾಗಿತ್ತು.

ಖತ್ತಲ್ ರಾತ್ರಿಯಂದು ಪರಂಪರೆಯಂತೆ ಪೀರ್ ಪಂಜಾ ಗಳಿಗೆ ಜೋಳದ ರೊಟ್ಟಿ, ಕಾಯಿಪಲ್ಲೆ ಮಾಲಿದ್ಯದ ನೈವೇದ್ಯದೊಂದಿಗೆ ಬಲಿಗಾಲಿನಿಂದ ದರ್ಗಾಕ್ಕೆ ತೆರಳಿ ಹರಕೆ ಪೂರೈಸುತ್ತಾರೆ. ಪಂಜಾ ಪೀರ್ ವಿಸರ್ಜನೆ ಮೆರವಣಿಗೆ ವೇಳೆ ಸದಲಗಾ ಪೊಲೀಸ್ ಠಾಣೆ ವತಿಯಿಂದ ವಿಶೇಷ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಮಹಾವೀರ ಚಿಂಚಣೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!