ಬಳ್ಳಾರಿ : ಸುಮಾರು 18 ವರ್ಗಳಿಂದಲೂ ಕಪ್ ಗಾಗಿ ಸೆಣಸಾಟ ಮಾಡುತ್ತಾ ಬಂದ್ರು ಆದ್ರೇ 17 ಬಾರಿ ದಂಡಯಾತ್ರೆಯಲ್ಲಿ ಆರ್ ಸಿಬಿ ಫೇಲ್ ಇದ್ರಿಂದ ಪ್ರತಿ ಭಾರಿ ಅಭಿಮಾನಿಗಳಲ್ಲಿ ಆಶಾಭಾವನೆ ಕಪ್ ಗೆಲ್ಲಬಹುದಾ ಎಂದು ಪ್ರತಿ ಭಾರಿಯೂ “ಈ ಸಲ ಕಪ್ ನಮ್ದೇ” ಘೋಷಣೆಯೇ ಆರ್ ಸಿಬಿ ಪ್ಯಾನ್ಸ್ ಗೆ ಆಶಾರೆಯಾಗಿತ್ತು.
ಆದ್ರೇ ಈ ಬಾರಿ ತಂಡದ ಸಮೂಹಿಕ ಹೋರಾಟದಿಂದ ಆರ್ಸಿಬಿಗೆ ಒಲಿದ ವಿಜಯಮಾಲೇ ದೇಶದಾದ್ಯಂತ ಇರುವ ಆರ್ ಸಿಬಿ ಅಭಿಮಾನಿಗಳಿಗೆ ನಿನ್ನೆ ಮರೆಯಲಾಗದ ಕ್ಷಣ ಕೇವಲ ಅತೀ ಕಡಿಮೆ ಮೊತ್ತ ಪೆರಿಸಿದ ಆರ್ ಸಿಬಿ ಈ ಬಾರಿಯೂ ಸೋಲುವ ಭೀತಿ ಪ್ರಾರಂಭದಲ್ಲಿ ಎದುರಿಸಿತು.
ಆದ್ರೇ ನಂತರ ಕ್ರಮೇಣ ಆಟದ ಮೇಲೆ ಹಿಡಿತ ಸಾಧಿಸ ತೊಡಗಿದ್ರು ಇನ್ನು ಆರ್ಸಿಬಿ ಅವರು ವಿನ್ ಆದಾ ಕೂಡಲೇ ಗಣಿ ಜಿಲ್ಲೆ ಬಳ್ಳಾರಿಯಾದ್ಯಂತ ಪಟಾಕಿಗಳ ಸರಮಾಲೆ ಅಭಿಮಾನಿಗಳ ಕೇಕೆ….ಬೈಕ್ ರೈಡ್ ….ಪ್ರಮುಖ ಸರ್ಕಲ್ಗಳಲ್ಲಿ ಕನ್ನಡ ಬಾಹುಟ ಹಿಡಿತು ಜೈಕಾರ ಬಳ್ಳಾರಿ ನಗರದ ಗಡಿಗಿ ಚೆನ್ನಪ್ಪ ಸರ್ಕಲ್ ನಲ್ಲಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ ಅಭಿಮಾನಿಗಳು ಒಂದಾ ಎರಡಾ ಸುಮಾರು 18 ವರ್ಷಗಳ ನಂತರ ಗೆಲುವಿನ ನಗೆ ಬೀರಿದ ಆರ್ ಸಿಬಿಗೆ ಅಭಿಮಾನಿಗಳ ಸಂಭ್ರಮದ ರಸದೌತಣ ಬಡಿಸಿದೆ.




