ಲಿಂಗಸ್ಗೂರು : ಹಟ್ಟಿ ಚಿನ್ನದ ಗಣಿ ವಿಲೇಜ್ ಶಾಪ್ಟ್ ಹತ್ತಿರ ವಿದ್ಯುತ್ ತಂತಿ ತಗಲಿ ಮೃತಪಟ್ಟ ಯುವಕನ ಕುಟುಂಬಕ್ಕೆ ಸಾಂತ್ವನ ಹೇಳುತ್ತಾ ಹೋದ ಜೀವ ಮರಳಿ ಬಾರದು ಆ ಭಗವಂತ ನಿಮ್ಮಗೆ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲಿ ಅಮರೇಶ್ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುವೆ ಕುಟುಂಬಕ್ಕೆ ಸಾಂತ್ವನ ಹೇಳುತ್ತಾ 10,000 ಸಹಾಯಧನ ನೀಡುವ ಮೂಲಕ ಮಾನವೀಯತೆ ಮೆರೆದರು.
ಹಲವಾರು ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಹೆಸರಾದ ಎಂ ಡಿ ಆರ್ ಬ್ರದರ್ಸ್ ಇಂಥ ಒಂದು ಒಳ್ಳೆ ಕಾರ್ಯ ಮಾಡಿರುವುದರಿಂದ ಆರ್ಥಿಕವಾಗಿ ಮೃತ ಕುಟುಂಬಕ್ಕೆ ಸಹಾಯ ಮಾಡಿದಂತಾಗಿದೆ ಇದರಿಂದ ಆ ದೇವರು ಆ ಕುಟುಂಬಕ್ಕೆ ಒಳ್ಳೆಯದು ಮಾಡಲಿ ಎಂದು ಮೃತ ಕುಟುಂಬಸ್ಥರು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಇಸ್ಮಯಿಲ್ ಪಾಶ ಪೊಲೀಸ್, ವಿನೋದ್ ಕಮಲದಿನ್ನಿ, ಶ್ರೀನಿವಾಸ್ ಮಧುಶ್ರೀ, ಯೋಗಪ್ಪ ದೊಡ್ಮನಿ, ಮೌಲ ಮಾಸ್ಟರ್, ಬಸವರಾಜ್ ಖಾನಾಪುರ್, ಸೂರಿ ಪೋಸ್ಟ್, ಮಲ್ಲಿಕಾರ್ಜುನ, ಸುರೇಶ್ ಗೌಡ ಗುರಿಕಾರ್, ಲಿಂಗಪ್ಪ ಸಿಐಟಿಯು, ಖಾಜಾ, ದುರ್ಗಪ್ಪ,ಸೇರಿದಂತೆ ಇನ್ನು ಅನೇಕ ಮುಖಂಡರು ಉಪಸ್ಥಿತರಿದ್ದರು.