Ad imageAd image

ಕಬ್ಬು ದರ ನಿಗದಿ ಮಾಡದ ಕಾರ್ಖಾನೆಗಳು! ಪಟ್ಟು ಬಿಡದ ರೈತ ಸಂಘಟನೆ

Bharath Vaibhav
ಕಬ್ಬು ದರ ನಿಗದಿ ಮಾಡದ ಕಾರ್ಖಾನೆಗಳು! ಪಟ್ಟು ಬಿಡದ ರೈತ ಸಂಘಟನೆ
WhatsApp Group Join Now
Telegram Group Join Now

————————4ಗಂಟೆ ವಾಹನ ತಡೆದು ಪ್ರತಿಭಟನೆ

ನಿಪ್ಪಾಣಿ: ಕೊಲ್ಲಾಪುರ ಜಿಲ್ಲೆಯ ಸಹಕಾರಿ ಸಕ್ಕರೆ ಕಾರ್ಖಾನೆಗಳು 3400 ಧರಘೋಷಿಸಿದೆ. ಆದರೆ ಕರ್ನಾಟಕದಲ್ಲಿಯ ಸಕ್ಕರೆ ಕಾರ್ಖಾನೆಗಳು ಎಫ್ ಆರ್ ಪಿ ದರಘೋಷಿಸದೆ ಕಬ್ಬು ಕಟಾವಿಗೆ ಅನುಮತಿ ನೀಡುತ್ತಿದ್ದು ಪ್ರತಿ ಟನ್ ಕಬ್ಬಿಗೆ 3750 ರೂಪಾಯಿ ನೀಡಬೇಕೆಂದು ಆಗ್ರಹಿಸಿ ಜಿಲ್ಲೆಯಲ್ಲಿಯ ಗುರ್ಲಾಪುರ್ ನಿಪ್ಪಾಣಿ, ಭೋಜ, ಬೇಡಕಿಹಾಳ, ಶಮನೆವಾಡಿ ಗ್ರಾಮಗಳಲ್ಲಿ ಹಾಗೂ ಕೊಲ್ಲಾಪುರ ಜಿಲ್ಲೆಯ ಅಕ್ಕಿವಾಟ, ಹೇರವಾಡ ಗ್ರಾಮಗಳಲ್ಲಿ ರೈತ ಸಂಘಟನೆಗಳು ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ ಟ್ರಾಲಿ ಗಳನ್ನು ತಡೆದು ಪ್ರತಿಭಟನೆ ನಡೆಸಿದರು.

 

ಶನಿವಾರ ಸಂಜೆ ಶಮನೆ ವಾಡಿ ಗ್ರಾಮದಲ್ಲಿ ಕಾಗಲ್, ಹುಪರಿ ಕೊಲ್ಲಾಪುರ್ ಸಕ್ಕರೆ ಕಾರ್ಖಾನೆಗಳಿಗೆ 15ಕ್ಕೂ ಅಧಿಕ ಕಬ್ಬು ತುಂಬಿದ ಟ್ರ್ಯಾಕ್ಟರ್ ಟ್ರಾಲಿ ತಡೆದು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಟ್ರ್ಯಾಕ್ಟರ್ ಡ್ರೈವರ್ ಹಾಗೂ ರೈತ ಸಂಘಟನೆಗಳ ಮಧ್ಯೆ ಕೆಲಕಾಲ ವಾದ-ವಿವಾದ ನಡೆಯಿತು ಸುಮಾರು ಮೂರು ಗಂಟೆಗಳನ್ನು ಬಳಿಕ ಟ್ರ್ಯಾಕ್ಟರ್ ಚಾಲಕರಿಂದ ಇನ್ನು ಮುಂದೆ ದರ ಘೋಷಿಸುವವರಿಗೆ ಕಬ್ಬು ಕಟಾವು ಮಾಡುವುದಿಲ್ಲವೆಂದು ಎಚ್ಚರಿಕೆ ನೀಡಿ ವಾಹನಗಳನ್ನು ಬಿಡಲಾಯಿತು.

ಶನಿವಾರ ರಾತ್ರಿ ಶಮನೆವಾಡಿಯಲ್ಲಿ 18 ಭೋಜದಲ್ಲಿ 8 ಮಾಂಗುರದಲ್ಲಿ 5 ಕೊಲ್ಲಾಪುರ ಜಿಲ್ಲೆಯ ಅಕಿವಾಟ್ 7 ಹೇರವಾಡ, ಹಾಗೂ ಕಬನೂರು ಗ್ರಾಮದಲ್ಲಿ 5 ಕಬ್ಬು ತುಂಬಿದ ಟ್ರ್ಯಾಕ್ಟರ್ ಟ್ರಾಲಿ ಗಳನ್ನು ತಡೆದು ರೈತ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಪ್ರತಿಭಟನೆಯಲ್ಲಿ ಜೈ ಕಿಸಾನ್ ರೈತ ಸಂಘಟನೆ ಅಧ್ಯಕ್ಷ ರಮೇಶ್ ಪಾಟೀಲ, ಸ್ವಾಭಿಮಾನಿ ರೈತ ಸಂಘಟನೆಯ ಕಾರ್ಯಕರ್ತ ಶೀತಲ ಚೌಗಲೆ ಕರ್ನಾಟಕ ರೈತ ಸಂಘಟನೆಯ ರಾಜು ಪವಾರ್, ಚೆನ್ನಪ್ಪ ಪೂಜಾರಿ ಶೀತಲ್ ಬಾಗೆ ಶಿವಗೂಂಡಾ ಪಾಟೀಲ, ಪೋಪಟ ಗೇಬಿಸೇ ಧನ್ಯ ಕುಮಾರ್ ಚೌಗಲೆ ಪ್ರತೀಕ ಪಳಗೆ ಪ್ರಕಾಶ ಖೋತ, ಪ್ರಮೋದ್ ಪಾಟೀಲ್ ಸ್ವಯಂ ಪಾಟೀಲ್ ಪಿಕೆ ಪಾಟೀಲ್ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಮಹಾವೀರ ಚಿಂಚಣೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!