—–ಇಟ್ಕಲ್ ಗ್ರಾಮದ ಲಾಲಪ್ಪ ಹನುಮಂತು ಬ್ಯಾಗರಿ ದುರ್ಘಟನಾ ಸಾವು ಘಟನೆ
ಸೇಡಂ: ತಾಲೂಕಿನ ಇಟ್ಕಲ್ ಗ್ರಾಮದ ನಿವಾಸಿ ಲಾಲಪ್ಪ ಹನುಮಂತು ಬ್ಯಾಗರಿ ಅವರು ದಿನಾಂಕ 01-11-2025 ರಂದು ದುರ್ಘಟನಾವಶಾತ್ ಸ್ಥಳೀಯ ಕೆರೆಗೆ ಬಿದ್ದು ಮೃತಪಟ್ಟಿರುವುದು ಅತ್ಯಂತ ದುಃಖದ ಸಂಗತಿ, ಮೃತರು ತಮ್ಮ ಕುಟುಂಬದ ಆರ್ಥಿಕ ಕಂಬವಾಗಿದ್ದು, ಅವರ ಅಕಾಲಿಕ ಸಾವಿನಿಂದ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇಡಂ ತಾಲೂಕು ಅಧ್ಯಕ್ಷ ಅನಿಲ್ ಪೊಟೇಲ್ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿದ ಅಂಶಗಳು
1. ಮೃತರ ಕುಟುಂಬಕ್ಕೆ ತಕ್ಷಣ ₹5 ಲಕ್ಷಕ್ಕೂ ಕಡಿಮೆ ಆಗದಂತೆ ಮಾನವೀಯ ಪರಿಹಾರ ಧನ ನೀಡಬೇಕು.
2. ಕುಟುಂಬದ ಸದಸ್ಯರಿಗೆ ಆರ್ಥಿಕ ಸಹಾಯ ಮತ್ತು ಜೀವನೋಪಾಯದ ಭರವಸೆ ನೀಡುವಂತೆ ಕ್ರಮ ಕೈಗೊಳ್ಳಬೇಕು.
3. ಸ್ಥಳೀಯ ಕೆರೆ ಮತ್ತು ನೀರಿನ ಮೂಲಗಳಲ್ಲಿ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಬೇಕು, ಇಂತಹ ದುರಂತಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು.
ಈ ಘಟನೆ ಗ್ರಾಮದಲ್ಲಿ ಜನರ ಹೃದಯ ಕಲುಕುವಂತಹ ದುಃಖದ ವಿಷಯವಾಗಿದೆ. ಸರ್ಕಾರ ಮಾನವೀಯ ದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ಸಂಘದ ಆಗ್ರಹ ಎಂದು ಅನಿಲ್ ಪೊಟೇಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




