ಬೆಂಗಳೂರು: ಚಿಕ್ಕಮಗಳೂರು ಮಲೆನಾಡಿ ನಲ್ಲಿ (ಕೋತಿ) ಮಂಗನ ರೋಗದ ಭೀತಿ ಮತ್ತೇ ಆರಂಭವಾಯಿತು ಕಾಫಿನಾಡಿನಲ್ಲಿ ಮತ್ತೊಂದು ಮಂಗನ ಕಾಯಿಲೆ ಪ್ರಕರಣ ಪತ್ತೆಯಾಗಿದೆ.
ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹತ್ತಿರ ಮತ್ತಿಖಂಡ ಗ್ರಾಮದ ೨೪ ವರ್ಷದ ಯುವಕನಿಗೆ (ಕೋತಿ)ಮಂಗನ ರೋಗದ ಲಕ್ಷಣಗಳು ಕಾಣಿಸಿಕೊಂಡಿತ್ತು. ಆತನನ್ನು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಆತನಿಗೆ ಮಂಗನ ಕಾಯಿಲೆಯಿರುವುದು ತಿಳಿದು ಬಂದಿದೆ.
ರಕ್ತಪರೀಕ್ಷೆಯಲ್ಲಿ ಮಂಗನ ಕಾಯಿಲೆ ಇರುವದನ್ನು ತಿಳಿದ ಬಂದ ನಂತರ ಗ್ರಾಮದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ, ನೀಡಿ ಗ್ರಾಮಸ್ಥರಿಗೆ ಕಾಡಿಗೆ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ. ಗ್ರಾಮದಲ್ಲಿ ತೆಗೆದು ಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಗ್ರಾಮಸ್ಥರಿಗೆ ಡಿಎಂಪಿಎ ತೈಲ ವಿತರಣೆ ಮಾಡಿರುವ ಸಿಬ್ಬಂದಿ, ಅನಾರೋಗ್ಯಕ್ಕೆ ತುತ್ತಾಗಿರುವ ವ್ಯಕ್ತಿಗಳ ಸ್ಯಾಂಪಲ್ಸ್ ಸಂಗ್ರಹಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ನಡುವೆ ಸೋಂಕು ದೃಢಪಟ್ಟಿರುವ ಯುವಕನನ್ನು ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ವರದಿ: ಅಯ್ಯಣ್ಣ ಮಾಸ್ಟರ್