ರಾಜ್ಯ ರೈತಸಂಘ, ಹಸಿರು ಸೇನೆ ಮಹಿಳಾ ಘಟಕ ಮತ್ತು ಅತಿಥಿ ಉಪನ್ಯಾಸಕರ ಬೆಂಬಲ
ನಿಪ್ಪಾಣಿ : ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿನಡೆಸುತ್ತಿರುವ ಹೋರಾಟ 9ನೇದಿನಕ್ಕೆ ಕಾಲಿರಿಸಿದ್ದು ಇಂದು ಕರ್ನಾಟಕ ರೈತ ಸಂಘ, ಹಸಿರು ಸೇನೆ ಮಹಿಳಾ ಘಟಕದ ರಾಜ್ಯ ಪದಾಧಿಕಾರಿಗಳು ಮತ್ತು ಅತಿಥಿ ಉಪನ್ಯಾಸಕರು ಬೆಂಬಲ ನೀಡಿದರು, ರೈತ ಸಂಘದ ರಾಜ್ಯ ಮಹಿಳಾ ಅಧ್ಯಕ್ಷೆ ಸಂಗೀತಾ ಚಾವರೆ ಮಾತನಾಡಿ, ಬೆಳಗಾವಿ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆ ಇದ್ದು, ಅಭಿವೃದ್ಧಿಯ ದೃಷ್ಟಿಯಿಂದ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯಾಗಿ ಮಾಡಿದರೆ, ಭೌಗೋಳಿಕವಾಗಿ, ವೈಜ್ಞಾನಿಕವಾಗಿ, ಆರ್ಥಿಕವಾಗಿ ಜಿಲ್ಲೆಯ ಜನರು ಸಭಲರಾಗುತ್ತಾರೆ ಮತ್ತು ಜಿಲ್ಲೆ ಆಗಲು ಚಿಕ್ಕೋಡಿಯು ಎಲ್ಲ ಮಾನದಂಡಗಳನ್ನು ಹೊಂದಿರುತ್ತದೆ, ಸರಕಾರ ಕೂಡಲೇ ಎಚ್ಚೆತ್ತು, ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು, ಇಲ್ಲವಾದರೆ ನಮ್ಮ ಮಹಿಳಾ ಘಟಕದಿಂದ ಉಗ್ರ ಹೋರಾಟ ಮಾಡುತ್ತೆವೆಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಅತಿಥಿ ಉಪನ್ಯಾಸಕರಾದ ಡಾ. ಯಲ್ಲಪ್ಪಾ ಖೋತ ಮಾತನಾಡಿ ಕಳೆದ ಮೂವತ್ತು ವರ್ಷಗಳಿಂದ ವಿವಿಧ ಹಂತಗಳ ಹೋರಾಟ ಮಾಡಿದರೂ ಕೂಡ, ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಆಗದೇ ಇರುವುದು ವಿಶಾಧನೀಯ ಸಂಗತಿ, ಜಿಲ್ಲೆ ಆದಲ್ಲಿ ಇಲ್ಲಿರುವ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕಾಲೇಜು, ಚನ್ನಮ್ಮಾ ವಿಶ್ವ ವಿದ್ಯಾಲಯದಂತಹ ಕಾಲೇಜುಗಳ ಜೊತೆಗೆ, ವಿವಿಧ ಹಂತದ ಕೈಗಾರಿಕೆಗಳು ಬಂದರೆ, ಯುವಕರಲ್ಲಿಯ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಬಹುದೆಂದು ಹೇಳಿದರು.
ಈ ಸಂಧರ್ಭದಲ್ಲಿ ಕ.ರಾ.ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಮಹಿಳಾ ಮುಖಂಡರಾದ ಅಶ್ವಿಣಿ ಪೋತದಾರ, ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾದ ಸಂಜು ಬಡಿಗೇರ, ಕಾರ್ಯದರ್ಶಿ ಚಂದ್ರಕಾಂತ ಹುಕ್ಕೇರಿ, ಉಜ್ವಲಾ ಬೇವನೂರ, ರೈತ ಮುಖಂಡ ಸಿದ್ರಾಮ ಕರಗಾಂವ, ಚಂದ್ರಶೇಖರ ಅರಭಾಂವಿ, ಶಿವಮ್ಮ ಮದಾಳೆ, ಮುನ್ನಾ ನದಾಫ, ಬಾಳವ್ವಾ ಕೋಳಿ, ಸಹದೇವಿ ನಡಗೇರಿ, ಪ್ರಕಾಶ ಅನ್ವೇಕರ, ತಾನಾಜಿ ಸಾನೆ, ರಫೀಕ ಪಠಾಣ, ಭೀಮರಾವ್ ಮಡ್ಡೆ, ಅಮೂಲ ನಾವಿ, ಸುರೇಶ ಖದ್ದಿ, ವಿಜಯ ಬ್ಯಾಳಿ, ಸಿದ್ದುಕಾಂಬಳೆ, ಕುಲದೀಪ ಬ್ಯಾಳಿ, ದುಂಡಪ್ಪಾ ಕೋಟಗಿ, ಚಂದು ಕೋಟಗಿ, ಸರ್ಕಾರಿ ಪದವಿ ಕಾಲೇಜಿನ ಸಾಗರ ಭೋಸಲೆ, ಅಜೀತ ಕೋಳಿ, ರಮಜಾನ್ ಮಿರ್ಜಾನಾಯಿಕ, ಸಚ್ಚಿದಾನಂದ ಸಾಳುಂಕೆ ಹಾಗೂ ನೂರಾರು ಜನ ಹೋರಾಟಗಾರರು ಉಪಸ್ಥಿತರಿದ್ದರು
ವರದಿ: ಮಹಾವೀರ ಚಿಂಚಣೆ




