Ad imageAd image

ಗರ್ಭಿಣಿ ಫೋಟೋಶೂಟ್ ವೇಳೆ ನೀರಿನ ಪೋಲ್ ಗೆ ಬಿದ್ದು ಮೊದಲ ಮಗು ಸಾವು 

Bharath Vaibhav
ಗರ್ಭಿಣಿ ಫೋಟೋಶೂಟ್ ವೇಳೆ ನೀರಿನ ಪೋಲ್ ಗೆ ಬಿದ್ದು ಮೊದಲ ಮಗು ಸಾವು 
BABY DEATH
WhatsApp Group Join Now
Telegram Group Join Now

ಬೆಂಗಳೂರು : ಬೆಂಗಳೂರಿನಲ್ಲಿ ಹೃದಯವಿದ್ರಾವಕ ಘಟನೆ ಒಂದು ನಡೆದಿದ್ದು, ಎರಡನೇ ಮಗುವಿನ ಖುಷಿಯಲ್ಲಿದ್ದ ದಂಪತಿಗೆ ಆಘಾತವಾಗಿದೆ.

ಗರ್ಭಿಣಿ ಫೋಟೋಶೂಟ್ ವೇಳೆ ಮೊದಲ ಮಗು ಸಾವನ್ನಪ್ಪಿದೆ. ಬೆಂಗಳೂರು ಹೊರವಲಯದ ಗಿಡ್ಡೆನಹಳ್ಳಿ ಈ ಒಂದು ಹೃದಯವಿದ್ರಾವಕ ಘಟನೆ ಸಂಭವಿಸಿದೆ.

ಎಂಟು ತಿಂಗಳ ಗರ್ಭಿಣಿ ಫೋಟೋ ಶೂಟ್ ವೇಳೆ ಈ ದುರ್ಘಟನೆ ಸಂಭವಿಸಿದೆ. ಫೋಟೋಶೂಟ್ ವೇಳೆ ಸ್ಥಳದಲ್ಲಿಯೇ ಸಣ್ಣ ನೀರಿನ ಪೋಲ್ ಇತ್ತು.

ಈ ವೇಳೆ ಮೊದಲ ಮಗನ ಕಡೆ ಗಮನ ಹರಿಸದೆ ನಿರ್ಲಕ್ಷ ವಹಿಸಿದ್ದಕ್ಕೆ ಆಟವಾಡುತ್ತಾ ನೀರಿಗೆ ಬಿದ್ದು ಮೂರು ವರ್ಷದ ಲಕ್ಷ್ಮೀರ ಎಂಬ ಮಗು ಸಾವನ್ನಪ್ಪಿದೆ.

ನಿನ್ನೆ ಸ್ವಾತಿ ಎಂಬಾಕೆ ತನ್ನ ಸ್ನೇಹಿತೆ ಜೊತೆ ಫೋಟೋಶೂಟ್ ಮಾಡಲು ತೆರಳಿದ್ದರು. ಖಾಸಗಿ ರೆಸಾರ್ಟ್ ಗೆ ತೆರಳಿ ಫೋಟೋ ಶೂಟ್ ಮಾಡುತ್ತಿದ್ದರು ಈ ವೇಳೆ ಮೂರು ವರ್ಷದ ಲಕ್ಷ್ಮೀರನನ್ನು ಆಟವಾಡಲು ಬಿಟ್ಟು ಫೋಟೋಶೂಟ್ ಮಾಡುತ್ತಿದ್ದರು. ಈ ವೇಳೆ ಮಗುವನ್ನು ಗಮನಿಸಿದೆ ಫೋಟೋಶೂಟ್ ಮಾಡುತ್ತಿದ್ದರು. ಆಗ ಮಗು ಆಟವಾಡುತ್ತ ಹೋಗಿ ನೀರಲ್ಲಿ ಬಿದ್ದು ಸಾವನಪ್ಪಿದೆ.

ಅರ್ಧ ಗಂಟೆಯ ನಂತರ ಹುಡುಕಾಡಿದರು ಮಗು ಸಿಕ್ಕಿರಲಿಲ್ಲ. ಬಳಿಕ ನೀರಿನ ಫೂಲ್ ನಲ್ಲಿ ಮಗುವಿನ ಶವ ಪತ್ತೆಯಾಗಿದೆ. ವಿದೇಶದಲ್ಲಿ ಕೆಲಸದ ಆಕೆಯ ಗಂಡ ತೆರಳಿದ್ದಾರೆ.

ಕೂಡಲೇ ಆಕೆ ಗಂಡನಿಗೆ ಕಾಲ್ ಮಾಡಿ ತಿಳಿಸಿದ್ದು, ಮರಣೋತ್ತರ ಪರೀಕ್ಷೆಗೆ ನೆಲಮಂಗಲದ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿನ ಮೃತದೇಹ ಶಿಫ್ಟ್ ಮಾಡಲಾಗಿದೆ. ಪೋಷಕರು ಕೂಡ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿಕೊಂಡಿ ದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!