ಕೊಲಂಬೋ: ಶ್ರೀಲಂಕಾ ಕ್ರಿಕೆಟ್ ತಂಡವು ಬಾಂಗ್ಲಾದೇಶ ವಿರುದ್ಧ ಇಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 77 ರನ್ ಗಳಿಂದ ಗೆಲುವು ಸಾಧಿಸಿತು.
ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 49.2 ಓವರುಗಳಲ್ಲಿ 244 ರನ್ ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ಆಡಿದ ಬಾಂಗ್ಲಾ 35.5 ಓವರುಗಳಲ್ಲಿ 167 ರನ್ ಗಳಿಗೆ ಆಲೌಟ್ ಆಯಿತು. ಹೀಗಾಗಿ 77 ರನ್ ಗಳಿಂದ ಗೆದ್ದ ಶ್ರೀಲಂಕಾ ಸರಣಿಯಲ್ಲಿ 1-0 ರಿಂದ ಮುನ್ನಡೆ ಸಾಧಿಸಿತು. ಶ್ರೀಲಂಕಾ ಪರವಾಗಿ ಶತಕ ಸಿಡಿಸಿದ ಅಸಲಂಕಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.




