ಚೇಳೂರು : ಪಟ್ಟಣ ಸೇರಿದಂತೆ ತಾಲೂಕಿನ ಹಲವು ಕಡೆಗಳಲ್ಲಿ ಶನಿವಾರ ಮಧ್ಯಾಹ್ನದ ವೇಳೆ ಸುಮಾರು 40 ನಿಮಿಷಗಳ ಕಾಲ ಹನಿಯ ಸಿಂಚನವಾಗಿದ್ದು,ವಾತಾವರಣ ಕೊಂಚ ತಂಪಾಯಿತು.
ತಾಲೂಕಿನಾದ್ಯಂತ ಹಲವು ದಿನಗಳಿಂದ ಬಿಸಿಲು ಹೆಚ್ಚಿದ್ದು, ಶನಿವಾರ ಮದ್ಯಾಹ್ನ ಸುಮಾರು 12 ರ ಸಮಯದಲ್ಲಿ ಮೋಡ ಕವಿದ ವಾತಾವರಣವಿತ್ತು. ತಂಪಾದ ಗಾಳಿ ಸಹ ಬೀಸಿತು.
ಇಷ್ಟುದಿನ ಬಿಸಿಲಿನ ಧಗೆಯಿಂದ ಬೇಸತ್ತಿದ್ದ ಜನರಿಗೆ ಮಳೆಯಿಂದ ಸ್ವಲ್ಪ ತಂಪಿನ ಅನುಭವವಾಯಿತು,ಕೆಲವರು, ಮಳೆ ಯಲ್ಲಿಯೇ ನಿಂತು ಸಂಭ್ರಮಿಸಿದರು.
ವರದಿ :ಯಾರಬ್. ಎಂ.