ಚೇಳೂರು : ಪಟ್ಟಣ ಸೇರಿದಂತೆ ತಾಲೂಕಿನ ಹಲವು ಕಡೆಗಳಲ್ಲಿ ಶನಿವಾರ ಮಧ್ಯಾಹ್ನದ ವೇಳೆ ಸುಮಾರು 60 ನಿಮಿಷಗಳ ಕಾಲ ಹನಿಯ ಸಿಂಚನವಾಗಿದ್ದು,ವಾತಾವರಣ ಕೊಂಚ ತಂಪಾಯಿತು.
ತಾಲೂಕಿನಾದ್ಯಂತ ಹಲವು ದಿನಗಳಿಂದ ಬಿಸಿಲು ಹೆಚ್ಚಿದ್ದು, ಶನಿವಾರ ಮದ್ಯಾಹ್ನ ಸುಮಾರು 1:30 ರ ಸಮಯದಲ್ಲಿ ಮೋಡ ಕವಿದ ವಾತಾವರಣವಿತ್ತು. ತಂಪಾದ ಗಾಳಿ ಸಹ ಬೀಸಿತು.
ಇದರಿಂದ ವಾತಾವರಣ ಸಂಪೂರ್ಣ ತಂಪಾಗಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು ಸ್ವಲ್ಪ ತಂಪಿನ ಅನುಭವವಾಯಿತು.
ದಿಢೀರ್ ಆಗಿ ಸುರಿದ ಮಳೆಯಿಂದಾಗಿ ಜನರ ಓಡಾಟಕ್ಕೆ ತೊಂದರೆಯಾಯಿತು. ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಮಳೆಯಿಂದ ರಕ್ಷಣೆ ಪಡೆಯಲು ಪರದಾಡಿದರು.ಕೆಲವರು ಮಳೆ ಯಲ್ಲಿಯೇ ನಿಂತು ಸಂಭ್ರಮಿಸಿದರು.
ವರದಿ :ಯಾರಬ್. ಎಂ.