ಜಗತ್ತಿನ ಕ್ರಿಕೆಟ್ ಹಬ್ಬ ಐಪಿಎಲ್ ಪಂದ್ಯಾವಳಿಯ ಮೊದಲ ಹಂತದ ಪಂದ್ಯಗಳು ಮರ್ಚ್ ೨೮ ರಿಂದ ಏಪ್ರಿಲ್ ೧೨ ರವರೆಗೆ ನಡೆಯಲಿವೆ.
ಪಂದ್ಯಾವಳಿಯ ೧೯ ನೇ ಎಡಿಷನ್ ಇದಾಗಿದ್ದು, ೧೦ ತಂಡಗಳು ಪಾಲ್ಗೊಳ್ಳಲಿವೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸೇರಿದಂತೆ ೧೦ ನಗರಗಳಲ್ಲಿ ಮೊದಲ ೨೦ ಪಂದ್ಯಗಳು ನಡೆಯಲಿವೆ.
ಪಂದ್ಯಾವಳಿಯ ಉದ್ಘಾಟನೆ ಪಂದ್ಯ ಬೆಂಗಳೂರಿನಲ್ಲಿ ಮಾ. ೨೮ ರಂದು ರಾಯಲ್ ಚಾಲೆಂರ್ಸ್ ಬೆಂಗಳೂರು ಹಾಗೂ ಸನ್ರೈರ್ಸ್ ಹೈದರಾಬಾದ್ ನಡುವೆ ನಡೆಯಲಿದೆ. ಪಂದ್ಯಾವಳಿಯ ಎರಡನೇ ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಐಪಿಎಲ್ ಮಂಡಳಿ ಶೀಘ್ರದಲ್ಲಿ ಪ್ರಕಟಿಸಲಿದೆ.




