ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಜುಲೈ 9 ರ ವರೆಗೆ ಐದು ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದಾರೆ. ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾ ಸೇರಿದಂತೆ ಐದು ರಾಷ್ಟ್ರಗಳ ಪ್ರವಾಸ ಇಂದಿನಿಂದ ಪ್ರಾರಂಭವಾಗಿದೆ.
ಇಂದು ಅವರು ರಾಷ್ಟ್ರ ರಾಜಧಾನಿಯಿಂದ ಘಾನಾಗೆ ಹೊರಟಿದ್ದಾರೆ. ಈ ಐದು ದೇಶಗಳ ಪ್ರವಾಸದ ನಡುವೆ ಅವರು ಬ್ರೆಜಿಲ್‌ನಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿಯೂ ಭಾಗವಹಿಸಲಿದ್ದಾರೆ.
ಪಶ್ಚಿಮ ಆಫ್ರಿಕಾದಿಂದ ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್‌ವರೆಗೆ, ಪ್ರಧಾನಿ ಮೋದಿಯವರ ಭೇಟಿಯು ರಾಜತಾಂತ್ರಿಕ ಮೈಲಿಗಲ್ಲುಗಳನ್ನು ಗುರುತಿಸುವುದಲ್ಲದೆ, ವಿದೇಶದಲ್ಲಿರುವ ಭಾರತೀಯ ಸಮುದಾಯದವರನ್ನು ಮೋದಿ ಭೇಟಿ ಮಾಡಲಿದ್ದಾರೆ.




