Ad imageAd image

ಪತಿ 2ನೇ ಮದುವೆ ಆಗುತ್ತಿದ್ದ ವೇಳೆಯೇ ಮೊದಲ ಪತ್ನಿ ಎಂಟ್ರಿ : ಮದುವೆ ಕ್ಯಾನ್ಸಲ್

Bharath Vaibhav
ಪತಿ 2ನೇ ಮದುವೆ ಆಗುತ್ತಿದ್ದ ವೇಳೆಯೇ ಮೊದಲ ಪತ್ನಿ ಎಂಟ್ರಿ : ಮದುವೆ ಕ್ಯಾನ್ಸಲ್
WhatsApp Group Join Now
Telegram Group Join Now

ತುಮಕೂರು : ಪತಿ 2ನೇ ಮದುವೆ ಆಗುತ್ತಿದ್ದ ವೇಳೆಯೇ ಏಕಾಏಕಿ ಕಲ್ಯಾಣ ಮಂಟಪಕ್ಕೆ ಮೊದಲ ಪತ್ನಿ ಎಂಟ್ರಿ ಕೊಟ್ಟು ಎಲ್ಲರಿಗೂ ಶಾಕ್ ಕೊಟ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ SLN ಕಲ್ಯಾಣ ಮಂಟಪದಲ್ಲಿ ತಾಳಿ ಕಟ್ಟುವ ಶುಭವೇಳೆ ಮೊದಲ ಹೆಂಡತಿ ರಂಪಾಟ ಮಾಡಿದ್ದಾರೆ.ಪೊಲೀಸರ ಜೊತೆಗೆ ಆಗಮಿಸಿ ಮದುವೆಯನ್ನೇ ನಿಲ್ಲಿಸಿದ್ದಾರೆ.

ಕಲ್ಯಾಣ ಮಂಟಪಕ್ಕೆ ಮೊದಲ ಪತ್ನಿ ಎಂಟ್ರಿಗೆ ಎರಡನೇ ಮದುವೆಗೆ ಮುಂದಾಗಿದ್ದ ಹರಿಪ್ರಸಾದ್ ಕಕ್ಕಾಬಿಕ್ಕಿಯಾಗಿದ್ದಾರೆ. ಮೊದಲ ಪತ್ನಿಗೆ ಡಿವೋರ್ಸ್ ಕೊಡದೇ ಎರಡನೇ ಮದುವೆಗೆ ಹರಿಪ್ರಸಾದ್ ಮುಂದಾಗಿದ್ದರು.

2014ರಲ್ಲಿ ಲೇಪಾಕ್ಷಿ, ಹರಿಪ್ರಸಾದ್ ಮದುವೆಯಾಗಿದ್ದರು. ಲೇಪಾಕ್ಷಿ ಬೆಂಗಳೂರಿನ ಆರ್.ಆರ್. ನಗರದ ನಿವಾಸಿಯಾಗಿದ್ದಾರೆ. 8ನೇ ತರಗತಿಯಿಂದ ಹರಿಪ್ರಸಾದ್, ಲೇಪಾಕ್ಷಿ ಲವ್ ಮಾಡುತ್ತಿದ್ದರು. ಮದುವೆಯಾಗಿ 10 ವರ್ಷ ಈ ಜೋಡಿ ಸಂಸಾರ ನಡೆಸಿದ್ದಾರೆ.

ಆದರೆ ಕೌಟುಂಬಿಕ ಕಲಹದಿಂದ ಹರಿಪ್ರಸಾದ್ ದಂಪತಿ ದೂರವಾಗಿದ್ದಾರೆ. ಮೊದಲ ಪತ್ನಿ ಲೇಪಾಕ್ಷಿಗೆ ಗೊತ್ತಾಗದಂತೆ ಹರಿಪ್ರಸಾದ್ 2ನೇ ಮದುವೆಗೆ ಸಿದ್ದರಾಗಿದ್ದರು.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹುಡುಗಿ ಜೊತೆಗೆ 2ನೇ ಮದುವೆ ನಡೆಯುತ್ತಿತ್ತು. ಈ ವೇಳೆ ಲೇಪಾಕ್ಷಿ ಪೊಲೀಸರೊಂದಿಗೆ ಆಗಮಿಸಿ ಮದುವೆ ನಿಲ್ಲಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!