Ad imageAd image

ಐಪಿಎಲ್ : ಮುಂಬೈ ಇಂಡಿಯನ್ಸ್ ಗೆ ಮೊದಲ ಗೆಲುವು

Bharath Vaibhav
ಐಪಿಎಲ್ : ಮುಂಬೈ ಇಂಡಿಯನ್ಸ್ ಗೆ ಮೊದಲ ಗೆಲುವು
WhatsApp Group Join Now
Telegram Group Join Now

ಮುಂಬೈ: ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ತನ್ನ ಮೊದಲ ಗೆಲುವು ಸಂಪಾದಿಸಿತು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ತನ್ನ ಮೂರನೇ ಲೀಗ್ ಪಂದ್ಯದಲ್ಲಿ ಅದು 8 ವಿಕೆಟ್ ಗಳಿಂದ ಸುಲಭವಾಗಿ ಗೆದ್ದು ಅಂಕ ಪಟ್ಟಿಯಲ್ಲಿ ಸ್ಥಾನ ಪಡೆಯಿತು.

ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಹೊನಲು ಬೆಳಕಿನ ಪಂದ್ಯದಲ್ಲಿ ಗೆಲ್ಲಲು 117 ರನ್ ಗಳ ಗೆಲುವಿನ ಗುರಿ ಪಡೆದಿದ್ದ ಮುಂಬೈ ಇಂಡಿಯನ್ಸ್ 12.5 ಓವರುಗಳಲ್ಲಿ ಕೇವಲ 2 ವಿಕೆಟ್ ಗಳ ನಷ್ಟಕ್ಕೆ 121 ರನ್ ಗಳಿಸಿ 2 ಅಂಕಗಳನ್ನು ಸಂಪಾದಿಸಿತು.

ಮುಂಬೈ ಇಂಡಿಯನ್ಸ್ ಪರ ರ್ಯಾನ್ ರಿಕೆಲ್ಟನ್ 41 ಎಸೆತಗಳಲ್ಲಿ 4 ಬೌಂಡರಿ 5 ಸಿಕ್ಸರ್ ನೆರವಿನಿಂದ 62 ರನ್ ಗಳಿಸಿ ಅಜೇಯರಾಗಿ ಉಳಿದರು. ಸೂರ್ಯ ಕುಮಾರ ಯಾದವ 9 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ನೆರವಿನಿಂದ 27 ರನ್ ಗಳಿಸಿದರು.

ಸ್ಕೋರ್ ವಿವರ:

ಕೋಲ್ಕತ್ತಾ ನೈಟ್ ರೈಡರ್ಸ್ 16.2 ಓವರುಗಳಲ್ಲಿ 116

ಮುಂಬೈ ಇಂಡಿಯನ್ಸ್ 12.5 ಓವರುಗಳಲ್ಲಿ 2 ವಿಕೆಟ್ ಗೆ 121

ಪಂದ್ಯ ಶ್ರೇಷ್ಠ: ಅಶ್ವಿನ್  ಕುಮಾರ್, ಕೋಲ್ಕತ್ತಾ ನೈಟ್ ರೈಡರ್ಸ್ 24 ಕ್ಕೆ 4

WhatsApp Group Join Now
Telegram Group Join Now
Share This Article
error: Content is protected !!