Ad imageAd image

ರೈತರ ಬೆಳೆ ಹಾನಿ ಮಾಡಿದ್ದ ಕಾಡಾನೆ ಸೆರೆ.

Bharath Vaibhav
ರೈತರ ಬೆಳೆ ಹಾನಿ ಮಾಡಿದ್ದ ಕಾಡಾನೆ ಸೆರೆ.
WhatsApp Group Join Now
Telegram Group Join Now

ಚಾಮರಾಜನಗರ:- ಜಿಲ್ಲೆಯ ಬಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಜಿ.ಎಸ್. ಬೆಟ್ಟ ವಲಯದ ಕಾಡಂಚಿನ ಗ್ರಾಮಗಳಾದ ಹಂಗಳ, ಕಲೀಗೌಡನಹಳ್ಳಿ ಮತ್ತು ದೇವರಳ್ಳಿ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳುಗಳಿದ ಕಾಡಾನೆಯೊಂದು ಲಗ್ಗೆ ಇಟ್ಟು ರೈತರ ಬೆಳೆಗಳನ್ನು ಅಪಾರವಾಗಿ ನಷ್ಟ ಮಾಡುತ್ತಿದ್ದ ಕಾಡಾನೆಯನ್ನು ಬುಧವಾರ ಬೆಳಗ್ಗೆ ಸೋಮನಾಥಪುರ ಸ್ಯಾಂಡಲ್ ಮೀಸಲು ಅರಣ್ಯ ಪ್ರದೇಶದಲ್ಲಿ ಸೆರೆಹಿಡಿದು ರಕ್ಷಿಸಲಾಯಿತು.

ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಹಿಮವದ್ ಗೋಪಾಲಸ್ವಾಮಿ ಬೆಟ್ಟ ವಲಯ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ 40 ವರ್ಷದ ಕಾಡಾನೆಯನ್ನು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಬಂಡೀಪುರ ಅರಣ್ಯಾಧಿಕಾರಿ ಎಸ್ ಪ್ರಭಾಕರನ್ ನೇತೃತ್ವದಲ್ಲಿ ಕುಮ್ಕಿ ಸಾಕಾನೆಗಳಾದ ಈಶ್ವರ, ಕಂಜನ್, ಶ್ರೀರಾಮ, ಲಕ್ಷ÷್ಮಣ ಹಾಗೂ ರಾಂಪುರ ಆನೆ ಶಿಬಿರದ ರೋಹಿತ್ ಮತ್ತು ಸಾಕಾನೆ ಮೇಲ್ವಿಚರಣಾ ಸಿಬ್ಬಂದಿಗಳನ್ನೊಳಗೊAಡ ಕಾರ್ಯಾಚರಣೆಯ ತಂಡದ ನಿರAತರ ಶ್ರಮದೊಂದಿಗೆ ಸೆರೆ ಹಿಡಿಯುವ ಕಾರ್ಯಾಚರಣೆಯು ಯಶಸ್ವಿಯಾಗಿದೆ.

ಸಹಾಯಕ ಅರಣ್ಯಾಧಿಕಾರಿ ನವೀನ್, ವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ್ ಹಾಗೂ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.ಸೆರೆ ಹಿಡಿದ ಆನೆಯನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಜನಸಮುದಾಯ ಪ್ರದೇಶಕ್ಕೆ ಹತ್ತಿರವಿಲ್ಲದಂತ ಅರಣ್ಯ ಪ್ರದೇಶದ ಮಧ್ಯಭಾಗ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ವರದಿ : ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!