ಕಲಘಟಗಿ:ಗ್ರಾಮೀಣ ಭಾಗಕ್ಕೆ ತೆರಳಿ ಜನರ ಅಹವಾಲು ಸ್ವೀಕರಿಸಿ ಆದಷ್ಟು ಸ್ಥಳದಲ್ಲಿ ಪರಿಹಾರ ಕಂಡುಕೊಳ್ಳುವದೇ ಕುಂದುಕೊರತೆ ಉದ್ದೇಶವಾಗಿದೆ ಎಂದು ಜಿಲ್ಲಾ ಪಂಚಾಯತಿ ಸಿಇಓ ಸ್ವರೂಪಾ ಟಿ.ಕೆ ಹೇಳಿದರು.
ಜಿಲ್ಲಾ ಪಂಚಾಯತಿ, ತಾಲ್ಲೂಕ ಪಂಚಾಯತಿ ಹಾಗೂ ತಾಲ್ಲೂಕಿನ ಬೀರವಳ್ಳಿ ಗ್ರಾಮ ಪಂಚಾಯತಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತಿ ಸಿಇಓ ನೇತೃತ್ವದಲ್ಲಿ ಬೀರವಳ್ಳಿ, ಬೆಂಡಲಗಟ್ಟಿ, ಆಸ್ತಕಟ್ಟಿ ಗ್ರಾಮದ ಜನರ ಸಾರ್ವಜನಿಕ ಕುಂದುಕೊರತೆ ಸಭೆ ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ನರೇಗಾ ಯೋಜನೆಯಡಿ ಸರ್ಕಾರಿ ಶಾಲೆಯ ಶೌಚಾಲಯ, ಆಟದ ಮೈದಾನ, ಕಂಪೌಂಡ್ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾರ್ಯಗಳಿಗೆ ತುರ್ತು ಸ್ಪಂದಿಸಿ ಕಾಮಗಾರಿಗೆ ಅನುಮೋದನೆ ನೀಡಲಾಗುವುದು ಎಂದರು.
ಸರ್ಕಾರದ ಅನುದಾನ ಬಂದಾಗ ಸರ್ವ ಸದಸ್ಯರು ಹಂಚಿಕೊಳ್ಳದೆ ಸಮಸ್ಯೆ ಇದ್ದ ಕಡೆ ಹೆಚ್ಚಿನ ಅನುದಾನದ ಬಳಕೆ ಮಾಡಿದರೆ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದು ಸಿಇಓ ಅವರು ಸದಸ್ಯರಿಗೆ ತಿಳಿಸಿದರು.
ಕುಂದುಕೊರತೆ ಸಭೆಯಲ್ಲಿ ಚರ್ಚೆಯಾದ ಸಮಸ್ಯೆಗಳು:
ಬೆಂಡಲಗಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಭೋಜನಾಲಯ ನಿರ್ಮಾಣ, ಶಾಲೆಯ ಇ- ಸ್ವತ್ತು ಉತ್ತಾರ ಪೂರೈಸುವದು ಅದೇ ಗ್ರಾಮದ ಸುಭಾಸ ಮಾದರ ದನದ ಕೊಟ್ಟಿಗೆ ಬಿಲ್ಲು ಅಪೂರ್ಣಗೊಂಡಿದೆ ಉಳಿದ ಹಣ ಪಾವತಿ ಮಾಡಲು ಒತ್ತಾಯಿಸಿದರು ಪರಿಶೀಲನೆ ಮಾಡಿ ಬಗೆಹರಿಸಲಾಗುವದು ಎಂದು ತಾಲ್ಲೂಕ ಪಂಚಾಯತಿ ಇಓ ಹೇಳಿದರು.
ಬೀರವಳ್ಳಿ ಗ್ರಾಮದ ರೈತರ ಜಮೀನಿಗೆ ತೆರಳುವ ರಸ್ತೆ ಅಭಿವೃದ್ಧಿ ಪಡಿಸುವದು,ಗ್ರಾಮಕ್ಕೆ ಹೊಂದಿಕೊಂಡಿರುವ ಗುಂಪು ಯೋಜನೆಯಲ್ಲಿ 20 ವರ್ಷಗಳಿಂದ ನಿರ್ಮಾಣವಾದ 50 ಆಶ್ರಯ ಮನೆಗಳಿಗೆ ನೀರು, ರಸ್ತೆ ಹಾಗೂ ಇತರೆ ಮೂಲಭೂತ ಸೌಕರ್ಯ ನೀಡಲು ನಿವಾಸಿಗಳು ಮನವಿ ಮಾಡಿದರು. ಬೆಂಡಲಗಟ್ಟಿ ಗ್ರಾಮದ ಸ್ಮಶಾನ ರಸ್ತೆ, ಎಸ್ ಸಿ ಕಾಲೋನಿಗೆ ಸಿಸಿ ರಸ್ತೆ ನಿರ್ಮಾಣ, ಕೆಳಗೆ ಜೋತು ಬಿದ್ದ ವಿದ್ಯುತ್ ತಂತಿ ಮೇಲಕ್ಕೆ ಹಾಕಲು ಗ್ರಾಮದ ಯಲ್ಲಪ್ಪ ಮಾದರ ಒತ್ತಾಯಿಸಿದರು.
ಬೆಂಡಲಗಟ್ಟಿ ಗ್ರಾಮದ ಜನರು ಅನ್ನ ಭಾಗ್ಯ ಅಕ್ಕಿ ಪಡೆಯಲು ಪ್ರತಿ ತಿಂಗಳು ಬೀರವಳ್ಳಿ ಗ್ರಾಮಕ್ಕೆ ಬರಬೇಕು ನಮಗೆ ಬೆಂಡಲಗಟ್ಟಿ ಗ್ರಾಮದಲ್ಲಿ ವಿತರಣೆ ಮಾಡಬೇಕು ಹಾಗೂ 1 ಕೆಜಿ ಅಕ್ಕಿ ಕಡಿಮೆ ನೀಡುತ್ತಾರೆ ಎಂದು ಹೇಳಿದರು.
ಆರೋಗ್ಯ ಕೇಂದ್ರದ ಸಿಬ್ಬಂದಿ ಸರ್ಕಾರದಿಂದ ಬರುವ ಔಷದಿ ಜನರಿಗೆ ಉಚಿತ ನೀಡದೆ ಹಣ ಪಡೆದು ನೀಡುತ್ತಾರೆ ಎಂದು ಜನರು ಆರೋಪಿಸಿದರು ಲಿಖಿತವಾಗಿ ಮನವಿ ಸಲ್ಲಿಸಿ ಕ್ರಮ ಜರುಗಿಸಲಾಗುವದು ಮುಕ್ಕಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ತಿಳಿಸಿದರು.
ಗ್ರಾಮ ಪಂಚಾಯತಿ ಉಪ್ಪಾಧ್ಯಕ್ಷ ಸಿದ್ದಪ್ಪ ತಾಳಿಕೋಟಿ ಮಾತನಾಡಿ ಗ್ರಾಮದ ಗ್ರಂಥಾಲಯ ಶೀತಿಲಾವ್ಯವಸ್ಥೆವಿದೆ ರಾಜೀವ ಗಾಂಧಿ ಸೇವಾ ಕೇಂದ್ರ ಮಂಜೂರು ಮಾಡಬೇಕು, ಸ್ಮಶಾನದವರೆಗೆ ವಿದ್ಯುತ್ ಸಂಪರ್ಕ, ಆಸ್ತಕಟ್ಟಿ ಬೀರವಳ್ಳಿ ರಸ್ತೆ ನಿರ್ಮಾಣ, ಕೆಎಸ್ ಆರ್ ಟಿ ಬಸ್ ಚಾಲಕರು ಮಹಿಳೆಯರು ಪ್ರಯಾಣ ಮಾಡುವಾಗ ಮಹಿಳೆಯರಿಗೆ ಅಸಭ್ಯ ವರ್ತನೆ ಮಾಡುತ್ತಾರೆ ಎಂದರು. ಸಿಬ್ಬಂದಿಗಳ ವಿರುದ್ಧ ದೂರು ಕೊಡಿ ಅವರ ವಿರುದ್ದ ಕ್ರಮ ಜರುಗಿಸಲು ಮೇಲಧಿಕಾರಿಗಳಿಗೆ ತಿಳಿಸಲಾಗುವದು ಎಂದು ಸಿಇಓ ಅವರು ತಿಳಿಸಿದರು.
ಕಾರ್ಯಕ್ರಮ ಮುಂಚಿತವಾಗಿ ಎಲ್ಲರೂ ಸಂವಿಧಾನ ಪೀಠಿಕೆ ಓದಿದರು.
ತಾಲ್ಲೂಕ ಪಂಚಾಯತಿ ಇಓ ಪರಶುರಾಮ ಸಾವಂತ ಅವರು ಪ್ರಾಸ್ತವಿಕವಾಗಿ ಮಾತನಾಡಿದರು. ಬಿಇಓ ಉಮಾದೇವಿ ಬಸಾಪುರ, ಸಮಾಜ ಕಲ್ಯಾಣ ಇಲಾಖೆಧಿಕಾರಿ ಎ. ಜೆ ಯೋಗಪ್ಪನವರ, ಪಂಚಾಯತ್ ರಾಜ್ ಇಲಾಖೆ ಇಂಜನಿಯರ ಸಂತೋಷ್ ಸತಾಳಿ, ತಾಲ್ಲೂಕ ಆರೋಗ್ಯಧಿಕಾರಿ ಕರ್ಲವಾಡ, ತಾಲ್ಲೂಕ ಉದ್ಯೋಗ ಖಾತ್ರಿ ನಿರ್ದೇಶಕ ಅಜಯ್ ಎನ್, ಕೃಷಿ ಅಧಿಕಾರಿ ಎಂ. ಸಿ ಕುಮಚಗಿ,ಗ್ರಾಮ ಪಂಚಾಯತಿ ಅಧ್ಯಕ್ಷೆ ಚನ್ನಮ್ಮ ಕಟ್ಟಿ, ಗ್ರಾಮ ಪಂಚಾಯತಿ ಪಿಡಿಓ ಶಿವಾನಂದ ಶಿಬಾರಗಟ್ಟಿ, ಆನಂದ ಅಂಗಡಿ ಹಾಗೂ ಗ್ರಾಮ ಪಂಚಾಯತಿ ಸರ್ವ ಸದಸ್ಯರು, ಗ್ರಾಮಸ್ಥರು ಇದ್ದರು.
ತಾಲ್ಲೂಕಿನ ಬೀರವಳ್ಳಿ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಮಂಗಳವಾರ ಜರುಗಿದ ಸಾರ್ವಜನಿಕ ಕುಂದು ಕೊರತೆ ಸಭೆ ಉದ್ದೇಶಿಸಿ ಜಿಲ್ಲಾ ಪಂಚಾಯತಿ ಸಿಇಓ ಸ್ವರೂಪಾ ಟಿ. ಕೆ ಮಾತನಾಡಿದರು. ತಾಲ್ಲೂಕ ಪಂಚಾಯತಿ ಇಓ ಪಿ. ವಾಯ್ ಸಾವಂತ ಇದ್ದಾರೆ.