Ad imageAd image

ಆಟವಾಡಲು ಹೋಗಿ ಬಾವಿಗೆ ಬಿದ್ದು ಬಾಲಕಿ ಸಾವು

Bharath Vaibhav
ಆಟವಾಡಲು ಹೋಗಿ ಬಾವಿಗೆ ಬಿದ್ದು ಬಾಲಕಿ ಸಾವು
WhatsApp Group Join Now
Telegram Group Join Now

ವಿಜಯಪುರ : ಆಟವಾಡಲು ಹೋಗಿ ಬಾಲಕಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಧನಸಿಂಗ್ ತಾಂಡಾದಲ್ಲಿ ಘಟನೆ ನಡೆದಿದೆ.

ಮೃತ ಬಾಲಕಿ ಅರ್ಚನಾ ದೀಪಕ್ ರಾಠೋಡ (8) ಎಂದು ತಿಳಿದುಬಂದಿದೆ. ಬಾಲಕಿ ತನ್ನ ತಾಯಿಯೊಂದಿಗೆ ಕುರಿ ಮೇಯಿಸಲು ಹೋಗಿದ್ದಳು. ಈ ವೇಳೆ ಆಟವಾಡುತ್ತಿದ್ದ ಬಾಲಕಿ ಆಯಾತಪ್ಪಿ ಬಾವಿಗೆ ಬಿದ್ದಿದ್ದಾಳೆ.

ಬಾವಿಗೆ ಬಿದ್ದಿರುವ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದರು. ರಕ್ಷಣಾ ಕಾರ್ಯಾಚರಣೆ ನಡೆಸಿ ಸದ್ಯ ಬಾಲಕಿಯ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಈ ಕುರಿತು ಇಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!