ಬೆಳಗಾವಿ : ಸತತ ಪ್ರಯತ್ನವಿದ್ದರೇ ಯಶಸ್ಸು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿ ಗುರಿಯ ಬಗ್ಗೆ ಸದೃಢವಾಗಿ ನಿರ್ಧರಿಸಿರಿ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ ಮಾರ್ಬನ್ಯಾಂಗ್ ಕರೆ ನೀಡಿದರು.
ನಗರದ ಬೆನೆನ್ ಸ್ಮಿಥ್ ಮೆಥೋಡಿಸ್ಟ್ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಸಾಂಸ್ಕೃತಿಕ ಸಂಭ್ರಮೋತ್ಸವದಲ್ಲಿ ಮಾತನಾಡಿದ ಅವರು, ಪ್ರಸ್ತುತ ವಿದ್ಯಾರ್ಥಿಗಳು ಓದಿನಡೆಗೆ ಗಮನ ಹರಿಸದೇ ಮೊಬೈಲ್ ಗಳ ಗೀಳಿಗೆ ಒಳಗಾಗಿದ್ದಾರೆ. ಅದರಿಂದ ಹೊರಬಂದು ಸಮಯ ವ್ಯರ್ಥ ಮಾಡದೇ ಪರಿಶ್ರಮದಿಂದ ಅಭ್ಯಸಿಸಬೇಕು. ಜೊತೆಗೆ ಕೇವಲ ಪರೀಕ್ಷಾ ದೃಷ್ಟಿಯಿಂದ ಓದದೇ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈಗನಿಂದಲ್ಲೇ ತಯಾರಿ ನಡೆಸಬೇಕು ಎಂದರು.
ಮೇಘಾಲಯದಿಂದ ಕರ್ನಾಟಕಕ್ಕೆ ಬರುತ್ತೇನೆ ನಿಮ್ಮ ಮುಂದೆ ಮಾತನಾಡುತ್ತೇನೆ ಎಂದು ನಾನು ಭಾವಿಸಿರಲಿಲ್ಲಾ. ಇದು ನನ್ನ ಪರಿಶ್ರಮದ ಫಲ. ಸಮಾಜದಲ್ಲಿ ಸಾಧನೆಗೈದ ಅನೇಕ ಯುವಕರಿದಾರೇ ಅವರನ್ನೇ ಸ್ಪೂರ್ತಿಯಾಗಿ ಪಡೆದು ಗುರಿ ತಲುಪಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ತಿಳಿಸಿದರು.
ಬಳಿಕ ಮಾತನಾಡಿದ ಮಹಾವಿದ್ಯಾಲಯದ ವ್ಯವಸ್ಥಾಪಕ ವಿಜಯ ಎಲೀಷ್ ಪ್ರಸ್ತುತ ಯುವ ಜನರು ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿಗೆ ಮಾರು ಹೋಗಿದ್ದೇವೆ. ಜಗತ್ತಿನಲ್ಲಿಯೇ ಅತೀ ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ರಾಜ್ಯ ನಮ್ಮದು. ರಾಜ್ಯದ ಎಲ್ಲ ಸಾಂಸ್ಕೃತಿಕ ಉಡುಗೆ ತೊಡುಗೆಗಳನ್ನು ಮರುಸ್ಥಾಪನೆಯ ಉದ್ದೇಶದಿಂದ ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ಸಂಭ್ರಮೋತ್ಸವ ಹಮ್ಮಿಕೊಂಡಿದ್ದೇವೆ ಎಂದರು.
ಈ ವೇಳೆ ಪ್ರಾಚಾರ್ಯ ಸಾಮುವೇಲ್ ಡ್ಯಾನಿಯೇಲ್, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆ ದೀಪಾ ಎಲ್., ವಿಶೇಷಾಧಿಕಾರಿ ನಾನಾಸಾಬ ಜಾಧವ, ಡಾ.ಎಚ್.ಎನ್.ಚುಳಕಿ, ಡಾ.ಮನೋಹರ ತಳ್ಳಿಮನಿ, ರಾಜಶ್ರೀ ಚನ್ನಮಿಲ್ಲಾ, ಪ್ರತಿಭಾ ಭಾವಿಕಟ್ಟಿ ಸೇರಿದಂತೆ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.