ಗೋಕಾಕ : ದೇವದಾಸಿಯರಾಗೋದು ದೇವೆ ಶಾಪವಲ್ಲ,ಹುಟ್ಟಿದಾಗಿನಿಂದಲೆ ಯಾರೂ ದೇವದಾಸಿರಾಗಿ ಹುಟ್ಟಿಲ್ಲ ಆ ಅನಿಷ್ಟ ಪದ್ದತಿ ಕೆಲವರು ನಮ್ಮ ಹಿರಿಯರಿಂದ, ಸಮಾಜದಿಂದ ಕೆಳಮಟ್ಟದವರನ್ನು ದೂಡಲ್ಪಟ್ಟಿದ್ದರಿಂದ ದೇವದಾಶಿಗಳಾಗಿದ್ದಾರೆ ಎಂದು
ಗೋಕಾಕ ತಾಲೂಕಾ ಪತ್ರಕರ್ತರ ಸಂಘದ ಅದ್ಯಕ್ಷ ಮನೋಹರ ಮೇಗೇರಿ ಇವರು ಅಮ್ಮಾ ಫೌಂಡೇಶನ್ ಮತ್ತು ಚಿಲ್ಡರನ್ ಆಫ್ ಇಂಡಿಯಾ ಪೌಂಡೇಶನ್ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಖಾಸಗಿ ಹೊಟೇಲ್ ನಲ್ಲಿ ಹಮ್ಮಿಕೊಂಡದ್ದ ದೇವದಾಸಿ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳಿಗೆ ಸರಕಾರದಿಂದ ಪರಿಹಾರಕ್ಕಾಗಿ ಮಾಧ್ಯಮದವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು
ಸರಕಾರದಿಂದ ದೇವದಾಸಿಯರಿಗೆ ಸೌಲಬ್ಯಗಳು ಸಿಗುತ್ತವೆ ಎಂಬ ಕಾರಣಕ್ಕಾಗಿ ದೇವದಾಶಿ ತಾಯಂದಿರು ಮಕ್ಕಳನ್ನು ನೀಷೇದಿತ ಅನಿಷ್ಟವಾದ ದೇವದಾಸಿ ಪದ್ದತಿಗೆ ತಳ್ಳಬೇಡಿ,ಅದನ್ನು ಬೇರು ಸಹಿತ ಕಿತ್ತುಹಾಕುವ ಪ್ರಯತ್ನವನ್ನು ನಾವೆಲ್ಕರೂ ಮಾಡಬೇಕಾಗಿದೆ,ದೇವದಾಸಿಯರು ಕೇವಲ ಕೇಳ ಜಾತಿಯಲ್ಲಿದ್ದಾರೆ. ಬೇರೆ ಜಾತಿಯವರಲ್ಲಿ ಯಾಕೆ ಇಲ್ಲ,
ದೇವರಲ್ಲಿ ಶೃದ್ದೆ ಭಕ್ತಿ ಇಟ್ಟು ಪೂಜೆ ಪುರಸ್ಕಾರ ಮಾಡಿ ಆದರೆ ದೇವರ ಹೆಸರಲ್ಲಿ ದೇವದಾಶಿಯರನ್ನಾಗಿ ಮಾಡಿ ಅವರ ಉಜ್ವಲ ಬವಿಷ್ಯ ಹಾಳುಮಾಡದಿರಿ.ಬಾಬಾ ಸಾಹೇಬರು ಶಿಕ್ಷಣ ಎಂಬ ಹುಲಿ ಹಾಲನ್ನು ಕುಡಿಯಲಿಕ್ಕೆ ಕೊಟ್ಟಿದ್ದಾರೆ ಅದನ್ನು ಕುಡಿದವರು ಘರ್ಜಿಸಲೆಬೇಕು,ಎಷ್ಟೊ ಜನ ದೇವದಾಸಿ ತಾಯಂದಿರ ಮಕ್ಕಳು ಶಿಕ್ಷಣ ಕಲಿತು ಉನ್ನತ ಮಟ್ಟದ ಅಧಿಕಾರಿಗಳಾಗಿದ್ದಾರೆ.ತಾವು ಕೂಡ ಅಧಿಕಾರಿಗಳಬೇಕೆಂದರು.
ನಾರಿ ಶಕ್ತಿ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಶೋಭಾ ಗಸ್ತಿ ಮಾತನಾಡಿ ದೇವದಾಸಿಯರ ಮಕ್ಜಳಿಗೆ ವಸತಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಒದಗಿಸಬೇಕು. ಅವರಲ್ಲಿ ಕಾನೂನಿನ ಅರಿವು ಮೂಡಿಸಬೇಕು. ಅವರಿಗೆ ಕೆಲಸ ನೀಡಿ ಅದಕ್ಕೆ ಅನುಗುಣವಾಗಿ ಕೂಲಿ ನಿಗದಿಪಡಿಸಬೇಕು. ಅವರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸರಕಾರ ಸ್ಪಂದಿಸಬೇಕು.
ದೇವದಾಸಿಯರಿಗೆ ಮಾಸಿಕ ಪಿಂಚಣಿಯನ್ನು ₹5 ಸಾವಿರಕ್ಕೆ ಹೆಚ್ಚಿಸಬೇಕು,ದೇವದಾಸಿ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಮೀಸಲಾತಿ ಒದಗಿಸಿಬೇಕು,ಎಂದು ವಿವಿಧ ಬೇಡಿಕೆಗಳನ್ನು ಸರಕಾರ ಈ ಕೂಡಲೇ ಪರಿಹರಿಸಬೇಕೆಂದು ಅಗ್ರಹಿಸಿದರು.
ಸಮಾಜದ ಎಲ್ಲಾ ವರ್ಗ, ಸಮುದಾಯಗಳಿಗೆ ಮೀಸಲಾತಿ ಇದ್ದಂತೆ ದೇವದಾಸಿ ಮಕ್ಕಳಿಗೆ ಮೀಸಲಾತಿ ಒದಗಿಸದರೆ ನಾವು ಮುಖ್ಯವಾಹಿನಿಗೆ ಬರಲು ಸಾಧ್ಯ,ಎಂದು ಹೇಳಿದರು. ರಾಜ್ಯದಲ್ಲಿ ಬೆರಳೆಣಿಕೆಯಷ್ಟು ದೇವದಾಸಿಯರಿಗೆ ಮಾತ್ರ ಸರಕಾರದ ಸೌಲಭ್ಯಗಳು ಸಿಗುತ್ತಲಿವೆ. ದೇವದಾಸಿಯ ತಾಯಂದಿರ ಮರು ಸಮೀಕ್ಷೆ ಮಾಡಬೇಕು
ಶಿಕ್ಷಣ, ವೃತ್ತಿ ತರಬೇತಿ, ಪರೀಕ್ಷೆಗಳು ಹಾಗೂ ವೃತ್ತಿ ಮತ್ತಿತರ ಎಲ್ಲ ರೀತಿಯ ಸರ್ಕಾರದ ಹಾಗೂ ಸರ್ಕಾರೇತರರ ಅರ್ಜಿ, ನಮೂನೆಗಳು, ಪ್ರಮಾಣ ಪತ್ರಗಳು ಮತ್ತಿತರ ಆನ್‌ಲೈನ್‌ಮತ್ತು ಆಫ್‌ಲೈನ್ ದಾಖಲೆಗಳಲ್ಲಿ ತಂದೆಯ ಹೆಸರು ಬರೆಯುವುದು ಐಚ್ಛಿಕವಾಗಲೇಬೇಕು. ತಾಯಿಯೊಬ್ಬರದೇ ಹೆಸರನ್ನು ನಮೂದಿಸುವುದು ಅಧಿಕೃತವಾಗಿ ಸ್ವಾಗತಾರ್ಹವಾಗಲಿ. ಇದರಿಂದ ತಂದೆಯ ಹೆಸರು ಗೊತ್ತಿಲ್ಲದ. ತಿಳಿಯದ, ಇಲ್ಲದ ನಿಷೇಧಿತ ದೇವದಾಸಿ ಪದ್ಧತಿಗೆ ಸಿಲುಕಿರುವ ತಾಯಂದಿರ ಮಕ್ಕಳು ವ್ಯಂಗ್ಯ, ಹಾಸ್ಯ, ಮೋಸ, ಸೌಲಭ್ಯಗಳಿಂದ ವಂಚನೆಗೊಳಗಾಗುತ್ತಿರುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ಗೋಕಾಕ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಾದಿಕ ಹಲ್ಯಾಳ, ಚಿಕ್ಕೋಡಿಯ ಪ್ರಜಾವಾಣಿ ವರದಿಗಾರ ಚಂದ್ರಶೇಖರ್ ಚಿನ್ನಕೇಕರ,
ದೇವದಾಸಿ ಶೋಭಾ ಸನದಿ , ನಿಂಗವ್ವ ಕಾಂಬಳೆ,ಯಶೋಧ ಗಸ್ತಿ, ಗಂಗವ್ವ ಪರಸನ್ನವರ ಸೇರಿದಂತೆ ಅನೇಕರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನಿಷ್ಟ ದೇವದಾಸಿ ಪದ್ಧತಿಯ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ಮೂಡಲಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಾ ಗಿರೆನ್ನವರ, ಮಂಜುಳಾ ಮಾದರ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ದರು.
ವರದಿ : ಮನೋಹರ ಮೇಗೇರಿ




