ಐನಾಪುರ: ವೇದಾಂತ ಕೇಸರಿ ಬಿರುದಾಂಕಿತ ಲಿಂ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಕೃಷ್ಣಾ ಕಿತ್ತೂರು ಗ್ರಾಮಕ್ಕೆ ಆಗಮಿಸಿ 75 ವರ್ಷವಾದ ಹಾಗೂ ಬಸವೇಶ್ವರ ಮಹಾಸ್ವಾಮಿಗಳು ಪೀಠಾಧಿಕಾರ ವಹಿಸಿಕೊಂಡು 25 ವರ್ಷ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಅಮೃತ ಮಹೋತ್ಸವದ ಜೊತೆಗೆ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ಭವ್ಯ ಶೋಭಾಯಾತ್ರೆ ಸಂಭ್ರಮ ಸಡಗರ ನಡುವೆ ಜರುಗಿತು.
ಗ್ರಾಮದ. ಮರಾಠಿ ಶಾಲೆಯಲ್ಲಿರುವ ವೀರ ಜವಾನ ಕಿರಣ ಜಾಧವ ಅವರ ಪುತಳಿಗೆ ಹೂವಿನ ಹಾರಕಿ ಮೆರವಣಿಗೆಗೆ ಕೃಷ್ಣಾಕಿತ್ತೂರ ಜ್ಞಾನ ಯೋಗಾಶ್ರಮದ ಬಸವೇಶ್ವರ ಸ್ವಾಮಿಗಳು ಚಾಲನೆ ನೀಡದರು,
ಮರಾಠಿ ಶಾಲೆ ಹನುಮಾನ ಗುಡಿ,ಗ್ರಾಮಪಂಚಾಯತ ಮಾರ್ಗ, ಐನಾಪುರ ರೋಡ, ಲಕ್ಷ್ಮಿದೇವಿ ಗುಡಿ, ಮೂಲಕ ಗುರುದೇವಾಶ್ರಮ ತಲುಪಿ ಸಮಾಪ್ತಿಗೊಂಡಿತು.

ಮೆರವಣಿಗೆಯುದ್ದಕ್ಕೂಓ ನಮಃ ಶಿವಾಯ ಘೋಷಣೆಗಳು ಮುಗಿಲು ಮುಟ್ಟಿದವು. ಪ್ರಮುಖ ಬೀದಿಗಳಲ್ಲಿ ಕೇಸರಿಧ್ವಜ, ಕಮಾನುಗಳು ರಾರಾಜಿಸಿದವು. ಕಟೌಟ್, ಬ್ಯಾನರಗಳ ಹಬ್ಬದ ಕಳೆ ಸೃಷ್ಠಿಸಿದವು.
ಮೆರವಣಿಗೆಯಲ್ಲಿ ಸಾವಿರಾರು ಮಹಿಳೆಯರು ಪೂರ್ಣ ಕುಂಭ ಹೊತ್ತು ಬರೆಗಾಲಿನಲ್ಲಿ ಹೆಜ್ಜೆ ಹಾಕಿದ್ದು ಭಕ್ತಿಯ ಪರಾಕಾಷ್ಠೆ ಸಾಕ್ಷಿಯಾಯಿತು. ಮೋಳೆಯ ಹಲಗೆ ವಾದನ ಮೆರವಣಿಗೆ ಆಕರ್ಷಿಸಿತು. ಜಾಂಜ್‌ಪತಾಕ್, ಆಕರ್ಷಿಸಿದವು.
ವರದಿ :ಮುರಗೇಶ ಗಸ್ತಿ




