Ad imageAd image

ಬಿಸಿಲಿನ ತಾಪ ಹೆಚ್ಚಾಗಿ ಕುಡಿಯುವ ನೀರಿನ ಅವ್ಯವಸ್ಥೆ ನೀರಿನ ಕೊಡವಿಟ್ಟು ಹೋರಾಟ

Bharath Vaibhav
ಬಿಸಿಲಿನ ತಾಪ ಹೆಚ್ಚಾಗಿ ಕುಡಿಯುವ ನೀರಿನ ಅವ್ಯವಸ್ಥೆ ನೀರಿನ ಕೊಡವಿಟ್ಟು ಹೋರಾಟ
WhatsApp Group Join Now
Telegram Group Join Now

ಚಿಕ್ಕೋಡಿ :ಕರ್ನಾಟಕ ರಕ್ಷಣಾ ವೇದಿಕೆ ನೇತ್ರತ್ವದಲ್ಲಿ ಚಿಕ್ಕೋಡಿ ತಾಲುಕಿನ ಶಿರಗಾಂವ ಗ್ರಾಮದಲ್ಲಿ ನೀರಿನ ಸಮಸ್ಯೆ ತುಂಬಾ ಆಗುತ್ತಿದ್ದು ಬೇಸಿಗೆ ಸಮಯ ಇರುವದರಿಂದ ಗ್ರಾಮ ಪಂಚಾಯತ ಮತ್ತು ಅಧಿಕಾರಿಗಳು ನೀರಿನ ಸಮಸ್ಯೆ ಬಗೆಹರಸಲು ಸದ್ಯ ಹೋಗುತ್ತಿಲ್ಲ.

ಆದ್ದರಿಂದ ಗ್ರಾಮ ಪಂಚಾಯತ ಕಛೇರಿ ಮುಂದಗಡೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು, ಗ್ರಾಮಸ್ಥರು ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಸೇರಿಕೊಂಡು ಪಂಚಾಯತ ಎದುರಗಡೆ ಖಾಲಿ ಕೊಡಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಲಾಯಿತು.

ಇದೆ ಸಂಧರ್ಬದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಸಂಜು ಬಡಿಗೇರ ಇವರು ಮಾತಾನಾಡಿ ಕರ್ನಾಟಕ ಸರಕಾರ ಬೇಸಿಗೆ ಬಂದಾಗ ಬೆಳಗಾವಿ ಜಿಲ್ಲೆಗೆ ನೂರಾರು ಕೋಟಿ ರೂಪಾಯಿ ನೀರಿಗಾಗಿ ಅನುದಾನ ಬಿಡುಗಡೆ ಮಾಡಿದ್ದು ಬೇಸಿಗೆ ಸಂದರ್ಬದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಬೇಕೆಂದು ಹೇಳಿರುತ್ತಾರೆ ಆದರೆ ಅಧಿಕಾರಿಗಳು ಕಛೇರಿಯಲ್ಲಿ ಇದ್ದು ಎಲ್ಲಿ ನೀರಿನ ಸಮಸ್ಯೆ ಇದೆ ಎಂದು ನೋಡಿಕೊಳ್ಳದೆ ಹಾಗೆ ಸುಮ್ಮನೆ ಕುಳಿತು ಕೊಳ್ಳುತ್ತಿದ್ದಾರೆ ಮತ್ತು ಇಲ್ಲಿ ಅಧಿಕಾರಿಗಳು ನೀರು ಕೇಳಿದರೆ ಇವತ್ತು ಬರುತ್ತೆ, ನಾಳೆ ಬರುತ್ತೆ, ಬೋರ ರಿಪೆರಿ ಇದೆ ಪಾಯಿಪ ಇಲ್ಲಾ ಎಂದು ಸುಖಾ ಸುಮ್ಮನೆ ಹೇಳಿಕೊಂಡು ಕಾಲ ಹರಣ ಮಾಡುತ್ತಿದ್ದು ಇದರಿಂದ ಶಿರಗಾಂವ ಗ್ರಾಮಸ್ತರಿಗೆ ನೀರಿನ ತುಂಬಾ ತೊಂದರೆ ಯಾಗುತ್ತಿದೆ ಎಂದು ಶ್ರೀ ಸಂಜು ಬಡಿಗೇರ ಅವರು ಹೇಳಿದರು.

ಇದೆ ಸಂದರ್ಬದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಶಿರಗಾಂವ ಗ್ರಾಮ ಘಟಕ ಅಧ್ಯಕ್ಷರಾದ ಅನೀಲ ನಾವಿ ಅವರು ಇಲ್ಲಿಯ ಅಧಿಕಾರಿಗಳಿಗೆ ಕಳೆದ ಹದಿನೈದು ದಿವಸಗಳಿಂದ ನಮಗೆ ನೀರು ಕೋಡಿ ಅಂತಾ ಕೇಳಿಕೊಳ್ಳುತ್ತಿದ್ದಾರೆ ಆದರೆ ಇಲ್ಲಿಯ ಅಧಿಕಾರಿಗಳ ನೀರಿನ ಸಮಸ್ಯೆ ಭಗೆಹರಿಸದೆ ಉಡಾಪೆ ಉತ್ತರಗಳನ್ನು ಹೇಳಿ ನಮಗೆ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿರಗಾಂವ ಗ್ರಾಮದ ಅಧ್ಯಕ್ಷರು ಶ್ರೀಮತಿ ಜೈಬುನ ಎಸ್ ತಹಸಿಲ್ದಾರ ಅವರು ಸ್ಥಳಕ್ಕೆ ಬಂದು ಎರಡು ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಎಂದು ಆಶ್ವಾಸನೆ ನೀಡಿದರು ಮತ್ತು ಅವರೆ ಖುದ್ದಾಗಿ ಚಿಕ್ಕೋಡಿ ತಹಸೀಲದಾರ ಸಾಹೇಬರಿಗೆ ಪೋನ್ ಮುಖಾಂತರ ನೀರಿನ ಸಮಸ್ಯೆ ಬಗ್ಗೆ ಮನವಿ ಮಾಡಿದರು, ತಹಸಿಲದಾರ ಸಾಹೇಬರು ಕೂಡಾ ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಯಿತು.

ಈ ಹೋರಾಟದ ಸಂದರ್ಭದಲ್ಲಿ ಬೀಬಿಜಾನ ಸಯ್ಯದ, ಮಂಗಲ ನಾವಿ, ಕಮಲಾ ಪಾಟೀಲ, ನೀಲಾಬಾಯಿ ಮಗದುಮ್ಮ, ಗೀತಾ ಕೇಸ್ತಿ, ಶಿವಕ್ಕಾ ಪಾಟೀಲ, ಅರಮಾನ ಸಯ್ಯದ, ರಾವಸಾಹೇಬ ಉದಗಟ್ಟಿ, ಶಿವಾಜಿ ಖಾಡೆ, ಸತೀಶ ಪೂಜಾರಿ, ಪುಟ್ಟು ಜಾಧವ, ಮಹಾದೇವ ಉದಗಟ್ಟಿ, ಸುರೇಶ ಮಗದುಮ್ಮ, ಶಿವಾನಂದ ಕೇಸ್ತಿ ಮತ್ತು ಗ್ರಾಮಸ್ಥರ ಉಪಸ್ಥಿತಿತರಿದ್ದರು.

ವರದಿ: ರಾಜು ಮುಂಡೆ

WhatsApp Group Join Now
Telegram Group Join Now
Share This Article
error: Content is protected !!