Ad imageAd image

ಅತ್ಯಾಚಾರಕ್ಕೆ ಸಹಕರಿಸಿದ್ರೇ ಮಹಿಳೆಗೂ ಶಿಕ್ಷೆ : ಹೈಕೋರ್ಟ್

Bharath Vaibhav
ಅತ್ಯಾಚಾರಕ್ಕೆ ಸಹಕರಿಸಿದ್ರೇ ಮಹಿಳೆಗೂ ಶಿಕ್ಷೆ : ಹೈಕೋರ್ಟ್
LAW
WhatsApp Group Join Now
Telegram Group Join Now

ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಮಹಿಳೆಯಿಂದ ರೇಪ್ ಸಾಧ್ಯವಿಲ್ಲದಿದ್ದರೂ, ರೇಪ್‌ಗೆ ಸಹಕರಿಸಿದರೆ ಆಕೆಗೆ ಶಿಕ್ಷೆಯಾಗಲಿದೆ ಎಂದು ಹೇಳಿದೆ. ರೇಪ್ ಪ್ರಕರಣದಲ್ಲಿ ಆರೋಪಿಯ ತಾಯಿ ಮತ್ತು ಸಹೋದರನನ್ನು ವಿಚಾರಣೆಗೊಳಪಡಿಸಿದ ಹೈಕೋರ್ಟ್ ಈ ತೀರ್ಪು ನೀಡಿದೆ.

ಭೋಪಾಲ್‌ನಲ್ಲಿ 2022ರ ಆಗಸ್ಟ್ 21ರಂದು ದಾಖಲಾದ ಎಫ್‌ಐಆರ್‌ನಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ದೂರಿನಲ್ಲಿ, ಆರೋಪಿ ತನ್ನ ಪ್ರೇಯಸಿಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದು, ಆತನ ತಾಯಿ ಮತ್ತು ಸಹೋದರ ಇದಕ್ಕೆ ಸಹಕರಿಸಿದ್ದಾರೆ ಎಂದು ಹೇಳಲಾಗಿತ್ತು.

ವಿಚಾರಣೆ ವೇಳೆ, ಆರೋಪಿಯ ತಾಯಿ ಮತ್ತು ಸಹೋದರ ಆಕೆಯನ್ನು ಕೋಣೆಯಲ್ಲಿ ಕೂಡಿಹಾಕಿದ್ದರು. ಅಲ್ಲದೇ, ಮದುವೆಗೂ ಮುಂಚೆ ದೈಹಿಕ ಸಂಬಂಧ ಸಾಮಾನ್ಯ ಎಂದು ಹೇಳಿ ಈ ಕೃತ್ಯಕ್ಕೆ ಪ್ರಚೋದನೆ ನೀಡಿದ್ದರು ಎಂದು ಹೇಳಲಾಗಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಮಹಿಳೆಯಿಂದ ರೇಪ್ ಸಾಧ್ಯವಿಲ್ಲ. ಆದರೆ, ರೇಪ್‌ಗೆ ಸಹಕರಿಸಿದರೆ ಆಕೆಗೆ ಐಪಿಸಿ ಸೆಕ್ಷನ್ 109ರ ಅಡಿ ಶಿಕ್ಷೆಯಾಗಲಿದೆ ಎಂದು ಹೇಳಿದೆ. ಈ ಪ್ರಕರಣದಲ್ಲಿ, ಆರೋಪಿಯ ತಾಯಿ ಮತ್ತು ಸಹೋದರ ರೇಪ್‌ಗೆ ಸಹಕರಿಸಿದ್ದು, ಅವರ ವಿರುದ್ಧ ಐಪಿಸಿ ಸೆಕ್ಷನ್ 376, 506-II ಮತ್ತು 190ರ ಅಡಿ ಪ್ರಕರಣ ದಾಖಲಿಸಲು ಸೂಚಿಸಿದೆ.

WhatsApp Group Join Now
Telegram Group Join Now
Share This Article
error: Content is protected !!