Ad imageAd image

ಪತ್ನಿಯ ಕತ್ತು ಸೀಳಿ ದೇಹದ ಮೇಲೆ ಕಾರು ಹತ್ತಿಸಿ ಬರ್ಬರವಾಗಿ ಹತ್ಯೆಗೈದ ಗಂಡ 

Bharath Vaibhav
ಪತ್ನಿಯ ಕತ್ತು ಸೀಳಿ ದೇಹದ ಮೇಲೆ ಕಾರು ಹತ್ತಿಸಿ ಬರ್ಬರವಾಗಿ ಹತ್ಯೆಗೈದ ಗಂಡ 
WhatsApp Group Join Now
Telegram Group Join Now

ಕಲಬುರ್ಗಿ : ರಾಜ್ಯದಲ್ಲಿ ಬೆಚ್ಚಿ ಬೀಳಿಸುವಂತಹ ಕೊಲೆ ನಡೆದಿದ್ದು, ಗಂಡನಿಂದಲೇ ಹೆಂಡತಿಯ ಭಯಾನಕ ಮರ್ಡರ್ ಆಗಿದ್ದು ಕಲ್ಬುರ್ಗಿ ಜಿಲ್ಲೆಯ ಅಫ್ಜಲಪುರ ದಲ್ಲಿ ನಡೆದಿದೆ.

ಕೊಲೆಯಾದ ಮಹಿಳೆಯನ್ನು ಶೈಲಾ (28) ಎಂದು ತಿಳಿದುಬಂದಿದೆ.ಕೊಲೆ ಮಾಡಿದ ಪತಿ ಅಕ್ಷಯ ಎಂದು ತಿಳಿದುಬಂದಿದೆ. ಇನ್ನು ಕೊಲೆ ಮಾಡುತ್ತಿರುವ ಭಯಾನಕ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು ಲೈವ್ ತೋರಿಸಿದ್ದಾನೆ

ಲೈವ್ ಮರ್ಡರ್ ದೃಶ್ಯ ಇದೀಗ ಬೆಚ್ಚಿ ಬೀಳಿಸುವಂತಿದೆ. ಅಫ್ಜಲ್ಪುರ ತಾಲೂಕಿನ ಬಳೂರಗಿ ಗ್ರಾಮದಲ್ಲಿ ಈ ಒಂದು ಭೀಕರವಾದ ಕೊಲೆ ನಡೆದಿದೆ. ಪತ್ನಿ ಕತ್ತು ಸೀಳಿ ದೇಹದ ಮೇಲೆ ಕಾರು ಹತ್ತಿಸಿ, ಪತಿ ಅಟ್ಟಹಾಸ ಮೆರೆದಿದ್ದಾನೆ.

ಬಳ್ಳೂರಗಿ ಗ್ರಾಮಕ್ಕೆ ಹೆಂಡತಿಯನ್ನು ಕರೆತಂದು ಕೊಲೆ ಮಾಡಿದ್ದಾನೆ. ನಡು ರಸ್ತೆಯಲ್ಲಿಯೇ ಬರಬರವಾಗಿ ಪಾಪಿ ಪತಿ ಕೊಲೆ ಮಾಡಿದ್ದಾನೆ ಮಹಿಳೆಯ ದೇಹದ ಮೇಲೆ ಕಾರು ಹತ್ತಿಸಿದ್ದಾನೆ.

ಮೂಲತಃ ಅಕ್ಷಯ ಮತ್ತು ಶೈಲ ಮಹಾರಾಷ್ಟ್ರದವರು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಎಸ್ಪಿ ಬೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದು ಆಫ್ಜಲ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!