ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಪತಿ ಮಹಾಶಯ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಯಲ್ಲವ್ವ (40) ಪತಿಯಿಂದ ಕೊಲೆಯಾದ ಮಹಿಳೆ.ಶಿವಪ್ಪ ಸಣ್ಣಬಸಪ್ಪ ಕಂಬಳಿ (46) ಪತ್ನಿಯನ್ನೇ ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಪತಿ.
ತವರು ಮನೆಗೆ ಹೋಗುತ್ತಿದ್ದ ಹೆಂಡತಿಯ ಜೊತೆ ಜಗಳವಾಡಿ ಆಕೆಯನ್ನೇ ಕೊಲೆಗೈದಿದ್ದಾನೆ. ಪತ್ನಿ ಯಲ್ಲವ್ವಳ ತಾಯಿ ಮೃತಪಟ್ಟು ಒಂದುವಾರವಾಗಿತ್ತು. ಹಾಗಾಗಿ ಧಾರ್ಮಿಕ ವಿಧಿವಿಧಾನ ಪೂರೈಸಲು ಯಲ್ಲವ್ವ ತವರು ಮನೆಗೆ ಹೋಗುತ್ತಿದ್ದರು.
ಆದರೆ ತವರಿಗೆ ಹೋಗದಂತೆ ಶಿವಪ್ಪ ಪತ್ನಿಗೆ ತಾಕೀತು ಮಾಡಿದ್ದಾನೆ. ಆದರೆ ಪತ್ನಿ ಹೋಗದಿರುವುದು ಸರಿಯಲ್ಲ ಎಂದಿದ್ದಾಳೆ. ಇಷ್ಟಕ್ಕೆ ಪತ್ನಿಯ ಕತ್ತು ಹಾಗೂ ಬೆನ್ನಿಗೆ ಕೊಡಲಿಯಿಂದ ಹೊಡೆದು ಬರ್ಬರವಾಗಿ ಕೊಂದೇ ಬಿಟ್ಟಿದ್ದಾನೆ.
ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.




