ಚಾಮರಾಜನಗರ: ಗಂಡನ ತಲೆಯಲ್ಲಿ ಕೂದಲು ಇಲ್ಲ ಎಂದು ಪತ್ನಿ ಕಿರುಕುಳ ನೀಡಿದ್ದರಿಂದ ಮನನೊಂದ ಪತಿ ಡೆತ್ ನೋಟ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ತಾಲೂಕು ಉಡಿಗಾಲ ಗ್ರಾಮದಲ್ಲಿ ನಡೆದಿದೆ.
32 ವರ್ಷದ ಪರಶುರಾಮ ಮೂರ್ತಿ ಆತ್ಮಹತ್ಯೆ ಮಾಡಿಕೊಂಡವರು ಎನ್ನಲಾಗಿದೆ.ಪತ್ನಿ ಮಮತಾ ಕಿರುಕುಳದಿಂದ ಪರಶಿವಮೂರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ಅವರು ಮದುವೆಯಾಗಿದ್ದರು.
ಮದುವೆಯ ನಂತರ ಆತನ ಕೂದಲು ಸಂಪೂರ್ಣ ಉದುರಿತ್ತು. ಮಮತಾ ಸುಳ್ಳು ವರದಕ್ಷಣೆಗೆ ಕೇಸ್ ದಾಖಲಿಸಿ ಪತಿಯನ್ನು ಜೈಲಿಗೆ ಕಳುಹಿಸಿದ್ದಳು. ಅಲ್ಲದೇ ತಾಳಿ ತೆಗೆದು ಜಾಲತಾಣಗಳಲ್ಲಿ ಫೋಟೋ ಹಾಕುತ್ತಿದ್ದಳು ಎನ್ನಲಾಗಿದೆ.
ತಲೆಯಲ್ಲಿ ಕೂದಲಿಲ್ಲ ಎಂದು ಪತ್ನಿ ಕಿರುಕುಳ ನೀಡಿ, ಸಾಮಾಜಿಕ ಜಾಲತಾಣದಲ್ಲಿ ತಾಳಿ ತೆಗೆದು ಫೋಟೋ ಹಾಕುತ್ತಿದ್ದಳು. ಇದೇ ವಿಚಾರಕ್ಕೆ ಮನೆಯಲ್ಲಿ ಪದೇಪದೇ ಜಗಳವಾಗುತ್ತಿತ್ತು. ಹೆಂಡತಿಯ ಕಾಟದಿಂದ ಪತಿ ನೇಣಿಗೆ ಶರಣಾಗಿದ್ದಾನೆ. ಚಾಮರಾಜನಗರ ಗ್ರಾಮೀಣ ಠಾಣೆಯಲ್ಲಿ ಕೇಸು ದಾಖಲಾಗಿದೆ.