ಬೆಂಗಳೂರು: ಪದ್ಮಭೂಷಣ, ಕರ್ನಾಟಕ ರತ್ನ ತ್ರಿವಿಧ ದಾಸೋಹಿ ನಡೆದಾಡುವ ದೇವರು ಎಂದೇ ಕರೆಯಲ್ಪಡುವ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಅವರು ದಾಸೋಹದ ಮುಖೇನ ಸಿದ್ದಗಂಗಾ ಮಠವೆಂದರೆ ಪ್ರಪಂಚವೇ ಗೌರವದಿಂದ ಕಾಣುವಂತೆ ಮಾಡಿದ್ದು
ಪೂಜ್ಯ ಡಾ. ಶಿವಕುಮಾರ ಸ್ವಾಮಿಗಳು ಎಂದು ಮಾಜಿ ಪಾಲಿಕೆ ಸದಸ್ಯ ಕೆ ನಾಗಭೂಷಣ್ ಹೇಳಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡಿನ ವ್ಯಾಪ್ತಿಗೆ ಬರುವ ಅಬ್ಬಿಗೆರೆಯಲ್ಲಿ ಗ್ರಾಮಸ್ಥರು ಮುಖಂಡರ ವತಿಯಿಂದ ಡಾ. ಶಿವಕುಮಾರ್ ಸ್ವಾಮಿಜಿಗಳ ೧೧೮ನೇ ವರ್ಷದ ಜಯಂತೋತ್ಸವ ಕಾರ್ಯ ಕ್ರಮ ಆಯೋಜಿಸಲಾಗಿತ್ತು.
ಮಾಜಿ ಪಾಲಿಕೆ ಸದಸ್ಯ ಕೆ ನಾಗಭೂಷಣ್ ಪೂಜ್ಯ ಡಾ. ಶಿವಕುಮಾರ್ ಸ್ವಾಮಿಜಿಗಳ ಪುತ್ಥಳಿಗೆ ಪೂಜಾ ಪುನಸ್ಕಾರ ಸಲ್ಲಿಸಿ ಮಾಲಾರ್ಪಣೆ ಮಾಡಿ ಶ್ರೀಗಳು ಮಠದ ಅಭಿವೃದ್ಧಿಗೆ ಮತ್ತು ಎಲ್ಲಾ ಸಮುದಾಯಗಳ ವಿದ್ಯಾರ್ಥಿಗಳಿಗೆ ತನ್ನ ಜೀವನವನ್ನೇ ಮುಡಿಪಾಗಿಟ್ಟು ಹಗಲು ರಾತ್ರಿ ಎನ್ನದೆ, ಬಿಸಿಲು, ಮಳೆ ಎನ್ನಲಿಲ್ಲ ಜೋಳಿಗೆ ಹಿಡಿದು ಕಾಲಿಗೆ ಚಕ್ರ ಊ ಊರು ಊರು ಸುತ್ತಿ ಹೋಳಿಗೆ ತುಂಬಿಸಿ ಕೊಂಡು ಬಂದು ನಿರೋಶ್ರಿತರಿಗೆ ಹಸಿವಿನಿಂದ ಬಂದವರಿಗೆ ದಾಸೋಹಿಯಾದರು, ಜ್ಞಾನ ವಾರಸಿ ಬಂದವರಿಗೆ ಜ್ಞಾನದ ಹಸಿವಿನ ದಾಸೋಹಿಗಳಾದರು,ಅನಾಥರಾಗಿ ಬಂದವರಿಗೆ ಆಶ್ರಯ ದಾಸೋಹಿಗಳಾದರು. ರಕ್ಷಣೆ ಕೊರಿ ಬಂದವರಿಗೆ ಅಭಯ ದಾಸೋಹಿಗಳಾದರು, ಹೀಗೆ ಅನೇಕ ರೂಪದಲ್ಲಿ ಶ್ರೀಗಳು ನಾಡಿಗೆ, ದೇಶಕ್ಕೆ ಮತ್ತು ಪ್ರಪಂಚದಾದ್ಯಂತ ದಾರಿದೀಪ ಅವರ ಆದರ್ಶಗಳು ಪ್ರತಿಯೋಬ್ಬರು ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು ಎಂದು ಕೆ. ನಾಗಭೂಷಣ್ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವೀರ ಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡ ರಾಜೇಂದ್ರ, ಶೆಟ್ಟಿಹಳ್ಳಿ ವಾರ್ಡಿನ ಕಾಂಗ್ರೆಸ್ ಪ್ರಭಾವಿ ಮುಖಂಡ ವಿಶ್ವನಾಥ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಯುವ ಘಟಕದ ರಾಜ್ಯಾಧ್ಯಕ್ಷ ಮೋಹನ್ ಕುಮಾರ್, ಉಮಾಪ್ರಿಯಾ, ಭಾಸ್ಕರ್ ಸೇರಿದಂತೆ ಹಿರಿಯರು ಯುವಕರು ಮುಂತಾದವರು ಉಪಸ್ಥಿತರಿದ್ದರು.
ವರದಿ: ಅಯ್ಯಣ್ಣ ಮಾಸ್ಟರ್