Ad imageAd image

ಅಕ್ಷಯ ತೃತೀಯದ ಮಹತ್ವ, ವಿಶೇಷ ಮತ್ತು ಫಲ

Bharath Vaibhav
ಅಕ್ಷಯ ತೃತೀಯದ ಮಹತ್ವ, ವಿಶೇಷ ಮತ್ತು ಫಲ
WhatsApp Group Join Now
Telegram Group Join Now

ಇಲಕಲ್: ವೈಶಾಖ ಮಾಸದ ಶುಕ್ಲ ಪಕ್ಷ ಮೂರನೆಯ ದಿನ(ತದಿಗೆ)ದಂದು ಅಕ್ಷಯ ತೃತೀಯಾವನ್ನು ಆಚರಿಸಲಾಗುತ್ತದೆ. ಈ ದಿನ ಖರೀದಿಸಿದ ಅಕ್ಕಿ , ಧಾನ್ಯಗಳು ಹರಿಶಿಣ & ಕುಂಕುಮ ಮತ್ತು ಯಾವುದೆ ರೀತಿಯ ವಸ್ತುಗಳನ್ನ ಯೊಗ್ಯವಕ್ತಿಗೆ ದಾನ ಮಾಡಿದಾಗ ಅದರ ಫಲ ಎಂದಿಗೂ ಅಕ್ಷಯವಾಗಿ ಉಳಿಯುತ್ತದೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿ ಶಾಶ್ವತ ಇದೆ. ಶ್ರೇಷ್ಠವಾದ ಕೆಲಸಗಳನ್ನು ಈ ದಿನ ಕೈಗೊಂಡರೆ ಎಂದಿಗೂ ಮುಗಿಯದಂತಹ ಅಕ್ಷಯ ವಾಗುತ್ತದೆ ಪಾಂಡವರು ವನವಾಸದಲ್ಲಿ ಇದ್ದ ಸಂದರ್ಭದಲ್ಲಿ, ಪಾಂಡವರು ಮತ್ತು ಅವರ ಪತ್ನಿ ದ್ರೌಪದಿ ಆಹಾರದ ಕೊರತೆಯಿಂದ ಬಳಲುತ್ತಿದ್ದರು. ಮಾತ್ರವಲ್ಲ, ತಮ್ಮಲ್ಲಿಗೆ ಭೇಟಿ ಕೊಟ್ಟ ಅತಿಥಿಗಳಿಗೆ ಸರಿಯಾದ ಭೋಜನವನ್ನು ಪೂರೈಸಲು ಕಷ್ಟವಾಗುತ್ತಿತ್ತು.

ಒಮ್ಮೆ ಇಂತಹ ಪರಿಸ್ಥಿತಿಯಲ್ಲಿರುವಾಗ, ಭಗವಾನ್ ಶ್ರೀಕೃಷ್ಣ, ತಯಾರಿಸಿದ ಆಹಾರ ಎಂದಿಗೂ ಕ್ಷಯವಾಗದಂತಹ ಪಾತ್ರೆಯೊಂದನ್ನು ದ್ರೌಪದಿಗೆ ನೀಡಿದನು. ಇದರ ಸಹಾಯದಿಂದ ಪಾಂಡವರಿಗೆ, ತಮ್ಮಲ್ಲಿಗೆ ಬಂದ ಅತಿಥಿಗಳಿಗೆ ಬೇಕುಬೇಕಾದ ಆಹಾರ ಪದಾರ್ಥಗಳನ್ನು ಕ್ಷಣಾರ್ಧದಲ್ಲಿ ತಯಾರಿಸಲು ಸಹಕಾರಿಯಾಗುತ್ತಿತ್ತು. ಹೀಗೆ ಶ್ರೀಕೃಷ್ಣನು ದ್ರೌಪದಿಗೆ ಅಕ್ಷಯ ಪಾತ್ರೆಯನ್ನು ನೀಡಿದ್ದು ಇದೇ ದಿನವಾಗಿದೆ. ಹಿಂದೂ ಪಂಚಾಂಗದ ಪ್ರಕಾರ, ತ್ರೇತಾಯುಗ ಅಕ್ಷಯ ತದಿಗೆಯಂದು ಆರಂಭವಾಯಿತು.ಕೃಷ್ಣನ ಗೆಳೆಯನಾದ ಸುಧಾಮನ ಕಥೆ ಕೂಡ ಅಕ್ಷಯ ತೃತೀಯಕ್ಕೆ ತಳುಕು ಹಾಕಿಕೊಂಡಿದೆ. ಕೃಷ್ಣನ ಬಾಲ್ಯ ಸಖನಾಗಿದ್ದು ಸುಧಾಮನು ಬಡತನವನ್ನು ಅನುಭವಿಸುತ್ತಿದ್ದರು. ಕೃಷ್ಣನ ಸಹಾಯವನ್ನು ಯಾಚಿಸುವುದಕ್ಕಾಗಿ ಆತ ಅವರ ಅರಮನೆಗೆ ಭೇಟಿಯನ್ನು ನೀಡುತ್ತಾರೆ. ಆದರೆ ಕೃಷ್ಣನನ್ನು ಕಂಡು ಅವರೊಂದಿಗೆ ಮಾತನಾಡಿದರೂ ಸುಧಾಮನು ಮುಜುಗರದಿಂದ ತನ್ನ ಯಾತನೆಯನ್ನು ಕೃಷ್ಣನಲ್ಲಿ ತೋಡಿಕೊಳ್ಳುವುದಿಲ್ಲ.

ಆದರೆ ಕೃಷ್ಣನು ಸುಧಾಮನ ಯಾತನೆಯನ್ನು ಅರಿತುಕೊಂಡು ಅವರು ತಮ್ಮ ಮನೆಯನ್ನು ತಲುಪುವ ಮೊದಲೇ ಸಕಲ ಸಂಪತ್ತಿನಿಂದ ಅವರ ಮನೆಯನ್ನು ಸಿಂಗಾರಗೊಳಿಸಿ ಸುಧಾಮನ ಬಡತನವನ್ನು ನೀಗಿಸುತ್ತಾರೆ ಆ ದಿನ ಅಕ್ಷಯ ತೃತಿಯವಾಗಿತ್ತು ,ಇನ್ನುಇದೇ ದಿನ ಭಗೀರಥನ ಪ್ರಯತ್ನದಿಂದಾಗಿ ಗಂಗೆಯು ಧರೆಗೆ ಇಳಿದು ಬಂದ ದಿನ ,ವಿಷ್ಣುವು ಪರಶುರಾಮ ಅವತಾರ ತಾಳಿದ್ದು ಇಂದಿನ ದಿನ. ಅಕ್ಷಯತದಿಗೆ ದಿನದಂದೇ ಮಹರ್ಷಿ ವೇದವ್ಯಾಸರು ಗಣಪತಿಯ ಅಮೃತಹಸ್ತದಿಂದ ಮಹಾಭಾರತ ಮಹಾಕಾವ್ಯದ ಬರವಣಿಗೆ ಆರಂಭಿಸಿದರು ಎಂಬ ನಂಬಿಕೆ ಇದೆ. ಭಕ್ತಿ ಭಂಡಾರಿ ಬಸವೇಶ್ವರರು ಜನಿಸಿದ್ದು ಸಹ ಇದೇ ದಿನ ಆಗಿದೆ, ಅಕ್ಷಯ ತೃತಿಯ ದಿನ ಮಾಡಿದ ಸರ್ವ ರೀತಿಯ ಕರ್ಮಗಳು ಅಕ್ಷಯವಾಗುತ್ತವೆ ಎಂಬ ನಂಬಿಕೆ . ಖರೀದಿಗಂತಲೂ ಧಾನಕ್ಕೆ ಅಧಿಕ ಫಲ ಇರುವುದು .

ಶ್ರೀ ವೀರೇಶ ಹಿರೇಮಠ ಶಾಸ್ತ್ರೀ

WhatsApp Group Join Now
Telegram Group Join Now
Share This Article
error: Content is protected !!