ಸಾಕಷ್ಟು ಭಾರಿ ಮನವಿ ನೀಡಿದರೂ ಕ್ರಮ ತೆಗೆದುಕೊಂಡಿಲ್ಲ ,ಸರಿಯಾದ ಸಮಯಕ್ಕೆ ಬಸ್ ಬಿಡುವಂತೆ ಪಟ್ಟು ಹಿಡಿದ ವಿದ್ಯಾರ್ಥಿಗಳು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರ ವಿದ್ಯಾರ್ಥಿಗಳ ನಡುವೆ ಕೆಲ ಹೊತ್ತು ಮಾತಿನ ಚಕಮಕಿ
ರಾಮದುರ್ಗ:ಸರಿಯಾದ ಸಮಯಕ್ಕೆ ಬಾರದ ಬಸ್ ಇದರಿಂದ ಶಾಲಾ ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ಹೋಗಲು ಆಗುತ್ತಿಲ್ಲ ಇದರಿಂದ ನಮ್ಮ ವಿದ್ಯಾಭ್ಯಾಸಕ್ಕೆ ಬಹಳ ತೊಂದರೆ ಆಗುತ್ತಿದೆ ಎಂದು ವಿದ್ಯಾರ್ಥಿಗಳು ದಿಡೀರ್ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ಹೊರ ಹಾಕಿದ ಘಟನೆ ಸುರೇಬಾನ ಬಸ್ ನಿಲ್ದಾಣದಲ್ಲಿ ನಡೆದಿದೆ
ಸಾಕಷ್ಟು ಹಳ್ಳಿಗಳಿಗೆ ಸರಿಯಾದ ಸಮಯಕ್ಕೆ ಬಸ್ಸುಗಳು ಬರುತ್ತಿಲ್ಲ ಇದರಿಂದ ತಡವಾಗಿ ಹೋಗುತ್ತಿದ್ದೇವೆ, ಕ್ಲಾಸ್ ಗಳು ಎಕ್ಸಾಮ್ ಗಳು ತಪ್ಪುತ್ತಿವೆ ಈ ಹಿಂದೆ ಬಸ್ಸುಗಳು ಬಿಡುವಂತೆ ಸಾಕಷ್ಟು ಮನವಿ ಮಾಡಿದರೂ, ಯಾವುದೇ ರೀತಿಯ ಕ್ರಮ ತಗೊಂಡಿಲ್ಲ ಎಂದು ಕೆಲ ಹೊತ್ತು ಬಸ್ಸುಗಳನ್ನು ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ವಿದ್ಯಾರ್ಥಿಗಳ ಮದ್ಯೆ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು.
ಈ ಹಿಂದೆ ಮನವಿ ನೀಡಿದ್ದರೂ ಸಹ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.ಇದು ಹೀಗೆ ಮುಂದುವರೆದರೆ ರಾಮದುರ್ಗ ಘಟಕದ ಯಾವುದೇ ಬಸ್ಸುಗಳನ್ನು ಬಿಡದೆ ಧರಣಿ ಕುಳಿತುಕೊಳ್ಳುತ್ತೇವೆ ಎಂದು ಎಚ್ಚರಿಸಿ ಮನವಿ ನೀಡಿದ್ದಾರೆ.
ವರದಿ: ಕುಮಾರ ಎಂ