ಜಮ್ಮುಕಾಶ್ಮೀರ : ಪಹಲ್ಗಾಮ್ ದಾಳಿಯ ಬಳಿಕ ಭಯೋತ್ಪಾದಕರ ವಿರುದ್ದ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಭಾರತೀಯ ಸೇನೆ ಕಾಶ್ಮೀರದಲ್ಲಿ ಉಗ್ರರು ಹಾಗೂ ಅವರ ಬೆಂಬಲಿಗರ ವಿರುದ್ದ ಕ್ರಮವನ್ನು ತೀವ್ರಗೊಳಿಸಿದೆ. ಇದೇ ವೇಳೆ ಮತ್ತೆ ನಾಲ್ವರು ಉಗ್ರರ ಮನೆಯನ್ನು ನೆಲಸಮಗೊಳಿಸಿ ಭಯೋತ್ಪಾದಕರಿಗೆ ಸ್ಪಷ್ಟ ಸಂದೇಶ ರವಾನಿಸಿದೆ.
ಕಾಶ್ಮೀರದ ಕುಪ್ವಾರ,ಬಂಡೀಪೋರಾ ಹಾಗೂ ಪುಲ್ವಾಮಾದಲ್ಲಿ ಹಲವು ಉಗ್ರರ ಮನೆಗಳನ್ನು ಸುಧಾರಿತ ಸ್ಫೋಟದ ಬಳಿಸಿ ಉಡಾಯಿಸಲಾಗಿದೆ.
ಕಾಶ್ಮೀರದ ಹಲವು ಸ್ಥಳೀಯ ನಿವಾಸಿಗಳು ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವುದಲ್ಲದೇ ಅವರಿಗೆ ಆಶ್ರಯವನ್ನೂ ನೀಡಿ ನೆರವಾಗಿದ್ದರು. ಇದರಿಂದ ಉಗ್ರರು ದಾಳಿ ನಡೆಸಲು ಸುಲಭವಾಗಿತ್ತು. ದಾಳಿ ನಡೆದ ಸಮಯದಲ್ಲಿಯೂ ಸಹ ಕೇವಲ ಹಿಂದೂಗಳನ್ನು ಗುರಿಯಾಗಿಸಿಕೊಂಡು ಉಗ್ರರು ತಮ್ಮ ನೀಚಕೃತ್ಯ ಎಸೆಗಿದ್ದರು.