——————————————-ಕಿವೀಸ್ ವಿರುದ್ಧದ ಏಕದಿನ ಸರಣಿ
ನವದೆಹಲಿ: ಭಾರತ ಹಾಗೂ ಪ್ರವಾಸಿ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವಣ ಮೂರು ಏಕದಿನ ಹಾಗೂ ೫ ಟ್ವೆಂಟಿ-೨೦ ಪಂದ್ಯಗಳ ಸರಣಿ ಜನವರಿ ೧೧ ರಿಂದ ಆರಂಭವಾಗಲಿದೆ. ಈ ಸರಣಿಗಾಗಿ ವಡೋದ್ರಾದಲ್ಲಿ ಜನವರಿ ೭ ರಂದು ಏಕದಿನ ತಂಡ ಪ್ರಕಟವಾಗುವ ನಿರೀಕ್ಷೆ ಇದೆ.
ಫೆ. ೭ ರಿಂದ ಟ್ವೆಂಟಿ-೨೦ ವಿಶ್ವಕಪ್ ಆರಂಭವಾಗಲಿದ್ದು, ಅದಕ್ಕೆ ಮುನ್ನ ನಡೆಯುವ ಈ ಎಂಟು ಪಂದ್ಯಗಳ ಸರಣಿಗೆ ಸಾಕಷ್ಟು ಮಹತ್ವ ಬಂದಿದೆ. ನ್ಯೂಜಿಲೆಂಡ್ ವಿರುದ್ಧ ಮೊದಲು ೩ ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಈ ಸರಣಿಗೆ ಹಿರಿಯ ಆಟಗಾರರು ತಂಡಕ್ಕೆ ಮರಳುವುದನ್ನು ನಿರೀಕ್ಷಿಸಲಾಗಿದೆ.
ತಂಡದ ಹಿರಿಯ, ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ರ‍್ಮಾ ತಂಡಕ್ಕೆ ಮರಳುವುದು ಖಚಿತವಾಗಿದ್ದು, ಶ್ರೇಯಸ್ ಅಯ್ಯರ ಕೂಡ ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ.
ಮೂರು ಪಂದ್ಯಗಳ ಏಕದಿನ ಸರಣಿ ನಂತರ ೫ ಪಂದ್ಯಗಳ ಟ್ವೆಂಟಿ-೨೦ ಸರಣಿ ಆರಂಭವಾಗಲಿದ್ದು, ಒಟ್ಟು ೮ ಪಂದ್ಯಗಳ ಈ ಸರಣಿ ಜನವರಿ ೩೧ ರ ವರೆಗೆ ನಡೆಯಲಿದೆ. ನಂತರ ಫೆ. ೭ ರಿಂದ ಶ್ರೀಲಂಕಾ ಹಾಗೂ ಭಾರತ ದೇಶಗಳು ಜಂಟಿಯಾಗಿ ಟ್ವೆಂಟಿ-೨೦ ವಿಶ್ವಕಪ್ ಗೆ ಆತೀಥ್ಯ ವಹಿಸಲಿವೆ.
ಜ. ೭ ರಂದು ಭಾರತ ತಂಡ ಪ್ರಕಟ ನಿರೀಕ್ಷೆ




