Ad imageAd image

ವರ್ಗಾವಣೆ ಭಾಗ್ಯಕ್ಕಾಗಿ ಗಿಳಿ ಶಾಸ್ತ್ರ ನಂಬಿದ ಐಟಿ ಅಧಿಕಾರಿ : ಬರೋಬ್ಬರಿ 35 ಲಕ್ಷ ರೂ. ಪಂಗನಾಮ

Bharath Vaibhav
ವರ್ಗಾವಣೆ ಭಾಗ್ಯಕ್ಕಾಗಿ ಗಿಳಿ ಶಾಸ್ತ್ರ ನಂಬಿದ ಐಟಿ ಅಧಿಕಾರಿ : ಬರೋಬ್ಬರಿ 35 ಲಕ್ಷ ರೂ. ಪಂಗನಾಮ
WhatsApp Group Join Now
Telegram Group Join Now

ಬೆಂಗಳೂರು: ವರ್ಗಾವಣೆ ಭಾಗ್ಯಕ್ಕಾಗಿ ಗಿಳಿ ಶಾಸ್ತ್ರ ನಂಬಿದ ಐಟಿ ಅಧಿಕಾರಿಯೊಬ್ಬರಿಗೆ ಬರೋಬ್ಬರಿ 35 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಂಚನೆ ಪ್ರಕರಣಸಂಬಂಧ ಕಾರ್ಯಾಚರಣೆ ನಡೆಸಿದ ಬೆಂಗಳೂರಿನ ಭಾರತಿನಗರ ಠಾಣೆ ಪೊಲೀಸರು ಆರೋಪಿ ಶೇಖರ್ ಎಂಬಾತನನ್ನು ಬಂಧಿಸಿದ್ದಾರೆ.

ಕೋರಮಂಗಲದ ಐಟಿ ಕಚೇರಿಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸತ್ಯನಾರಾಯಣ್ ಅವರು ತಮ್ಮ ವರ್ಗಾವಣೆ (Transfer) ವಿಚಾರವಾಗಿ ಚಿಂತಿತರಾಗಿದ್ದರು.

ಈ ವೇಳೆ ರಸ್ತೆಯಲ್ಲಿ ಗಿಳಿ ಶಾಸ್ತ್ರ ಹೇಳುತ್ತಿದ್ದ ಶೇಖರ್ ಎಂಬಾತನ ಪರಿಚಯವಾಗಿದೆ. “ನಿಮ್ಮ ಮುಖ ನೋಡಿ ಜಾತಕ ಹೇಳುತ್ತೇನೆ, ಪೂಜೆ ಮಾಡಿಸಿದರೆ ನಿಮ್ಮ ಜೀವನ ಸುಧಾರಿಸುತ್ತದೆ ಮತ್ತು ಅಂದುಕೊಂಡ ಕೆಲಸಗಳಾಗುತ್ತವೆ” ಎಂದು ಶೇಖರ್ ಅಧಿಕಾರಿಯನ್ನು ನಂಬಿಸಿದ್ದಾನೆ.

ವಂಚನೆಯ ಹಂತಗಳು:

ಪೂಜೆಯ ನೆಪ: ಮೊದಲು 50 ಸಾವಿರ ರೂಪಾಯಿ ಪಡೆದು ಸಣ್ಣ ಮಟ್ಟದ ಪೂಜೆ ಮಾಡಿದ್ದ ಶೇಖರ್, ನಂತರ ಪದೇ ಪದೇ ಅಧಿಕಾರಿಗೆ ಕರೆ ಮಾಡಿ ನಂಬಿಕೆ ಹುಟ್ಟಿಸಿದ್ದಾನೆ.

ದೊಡ್ಡ ಪೂಜೆಯ ಆಮಿಷ: ಅಧಿಕಾರಿ ತನ್ನ ವರ್ಗಾವಣೆ ಬಗ್ಗೆ ಕೇಳಿದಾಗ, ಅದಕ್ಕೆ “ದೊಡ್ಡ ಪೂಜೆ” ಮಾಡಬೇಕೆಂದು ಹೇಳಿ ಬೆಲೆಬಾಳುವ ವಸ್ತುಗಳನ್ನು ತರಲು ಸೂಚಿಸಿದ್ದಾನೆ.

ಕಳೆದುಹೋದ ಚಿನ್ನಾಭರಣ: ಶೇಖರ್ ಮಾತು ನಂಬಿದ ಅಧಿಕಾರಿ ಸತ್ಯನಾರಾಯಣ್ ಅವರು 190 ಗ್ರಾಂ ಚಿನ್ನ ಹಾಗೂ 1 ಕೆಜಿ 300 ಗ್ರಾಂ ಬೆಳ್ಳಿಯನ್ನು (ಒಟ್ಟು ಅಂದಾಜು 35 ಲಕ್ಷ ರೂ. ಮೌಲ್ಯ) ಪೂಜೆಗಾಗಿ ನೀಡಿದ್ದರು.

ಸಿಕ್ಕಿಬಿದ್ದ ಆರೋಪಿ:

ಪೂಜೆ ಮುಗಿದ ನಂತರ ಒಂದು ದಿನದಲ್ಲಿ ಒಡವೆಗಳನ್ನು ಮರಳಿಸುವುದಾಗಿ ಹೇಳಿದ್ದ ಶೇಖರ್, ಆ ಬಳಿಕ “ಇನ್ನೂ ಪೂಜೆ ಮುಗಿದಿಲ್ಲ” ಎಂದು ಸಬೂಬು ಹೇಳುತ್ತಾ ಸತಾಯಿಸಲು ಆರಂಭಿಸಿದ್ದಾನೆ.

ತಾನು ಮೋಸ ಹೋಗಿರುವುದು ಖಚಿತವಾಗುತ್ತಿದ್ದಂತೆಯೇ ಅಧಿಕಾರಿ ಸತ್ಯನಾರಾಯಣ್ ಅವರು ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಕೈಗೆತ್ತಿಕೊಂಡ ಪೊಲೀಸರು ಸದ್ಯ ಆರೋಪಿಯನ್ನು ಪತ್ತೆ ಹಚ್ಚಿ ಕಳವು ಮಾಡಿದ್ದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!