ರಾಮದುರ್ಗ:ಸಾವಿರಾರು ಭಕ್ತರ ಆರಾಧ್ಯ ದೈವ ಸುಕ್ಷೇತ್ರ ವೆಂದು ಪ್ರಸಿದ್ಧಿ ಪಡೆದ ತಾಲೂಕಿನ ಅವರಾದಿ ಶ್ರೀ ಮನ್ನಿರಂಜನ ಫಲಾಹಾರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಪ್ರತಿ ವರ್ಷ ಹೊಸ್ತಿಲ ಹುಣ್ಣಿಮೆಯಂದು ಮಹಾ ರಥೋತ್ಸವವು ಜರುಗುವುದು. ಶ್ರೀ ಮ.ನಿ.ಪ್ರ.ಸ್ವ.ಲಿಂ.ಮೃತ್ಯುಂಜಯ ಮಹಾಸ್ವಾಮಿಗಳವರ ದಿವ್ಯ ಪ್ರಕಾಶದಲ್ಲಿ ಶ್ರೀ ಮಠದ ಪಿಠಾಧಿಪತಿಗಳು ಶ್ರೀ ಮ.ನಿ.ಪ್ರ.ಶಿವಮೂರ್ತಿ ಮಹಾ ಸ್ವಾಮಿಗಳವರ ಸದಿಚ್ಛೆಯಂತೆ ರವಿವಾರ ಸಂಜೆ ಸಾವಿರಾರು ಭಕ್ತರ ಹರ್ಷೋದ್ಗಾರ ಮದ್ಯ ಸಕಲ ಮಂಗಲ ವಾದ್ಯ ಮೇಳಗಳೊಂದಿಗೆ ಅತ್ಯಂತ ಸಡಗರ ಸಂಭ್ರಮದಿಂದ ಮಹಾ ರಥೋತ್ಸವ ಜರುಗಿತು .
ಮಹಾ ರಥೋತ್ಸವ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಗಳು ಕಟಕೋಳ ಶ್ರೀಮಠದ ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳು, ರಾಮದುರ್ಗ ಶ್ರೀಮಠದ ಶ್ರೀ ಶಾಂತವೀರ ಮಹಾಸ್ವಾಮಿಗಳು, ಮುಳ್ಳೂರ ಶ್ರೀಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು,
ಅಡ್ನೂರ ಗದಗ ಶ್ರೀಮಠದ ಶ್ರೀ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಪೂಜ್ಯ ಶ್ರೀಗಳ ದಿವ್ಯ ಸಾನಿಧ್ಯ ಹಾಗೂ ಗಣ್ಯರು ಮಹಾ ರಥೋತ್ಸವಕ್ಕೆ ಚಾಲನೆ ನೀಡಿದರು. ಜಾತ್ರಾ ಮಹಾ ರಥೋತ್ಸವ ಕಾರ್ಯಕ್ರಮದಲ್ಲಿ ಸುತ್ತ ಮುತ್ತಲಿನ ಗ್ರಾಮಗಳಿಂದ ಭಕ್ತರು ಎತ್ತಿನ ಗಾಡಿ, ಟ್ರ್ಯಾಕ್ಟರ್ ಹಾಗೂ ಪಾದಯಾತ್ರೆ ಮೂಲಕ ಆಗಮಿಸಿ ಅಪಾರ ಜನಸ್ತೋಮ ಸೇರಿ ಮಹಾ ರಥೋತ್ಸವಕ್ಕೆ ಭಕ್ತರು ಹಣ್ಣು, ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು.
ವರದಿ: ಕುಮಾರ ಎಂ