
ಬೆಂಗಳೂರು: ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಹೆಗ್ಗನಹಳ್ಳಿ ಕ್ರಾಸ್ ನಲ್ಲಿ ಜಯ ಸಿಂಹ ಕನ್ನಡ ಯುವಕರ ವೇದಿಕೆಯ ಅಧ್ಯಕ್ಷರಾದ ಶ್ರೀನಿವಾಸ್(ಸೀನಣ್ಣ) ಅವರ ನೇತೃತ್ವದಲ್ಲಿ ನಟ ವಿಷ್ಣುವರ್ಧನ್ ಅವರ 75ನೇ ಜಯಂತೋತ್ಸವ ಹಾಗೂ ಅನ್ನ ಸಂತರ್ಪಣೆ ಕಾರ್ಯ ಕ್ರಮ ಆಯೋಜಿಸಲಾಗಿತ್ತು.
ಸ್ಥಳೀಯ ಸಮಾಜ ಸೇವಕ ಹೆಚ್ ಆರ್ ಪ್ರಕಾಶ್, ಡಾ. ನಾಗೇಶ್ ಕುಮಾರ್, ಸಪ್ತಗಿರಿ ಆನಂದ್, ನಟರಾಜ್ ಸೇರಿದಂತೆ ಮುಂತಾದವರು ಡಾ. ವಿಷ್ಣುವರ್ಧನ್ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
ಜಯ ಸಿಂಹ ಕನ್ನಡ ಯುವಕರ ವೇದಿಕೆಯ ಅಧ್ಯಕ್ಷರಾದ ಶ್ರೀನಿವಾಸ್ (ಸೀನಣ್ಣ) ಅವರು ಸರ್ವರಿಗೂ ಸ್ವಾಗತಿಸಿದರು. ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅಭಿಮಾನಿ ಶ್ರೀನಿವಾಸ್ ಸೀನಣ್ಣ ಅವರು ವಿಷ್ಣುವರ್ಧನ್ ಅವರ ಜಯಂತೋತ್ಸವವನ್ನು ಅರ್ಥ ಪೂರ್ಣವಾಗಿ ಆಚರಿಸುವುದಲ್ಲದೆ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಮಾಡಿದ್ದು ಒಳ್ಳೆಯ ಬೆಳವಣಿಗೆ ಇಂತಹ ಮಹಾನೀಯರ ಹುಟ್ಟು ಹಬ್ಬವನ್ನು ಆಚರಿಸುವುದರಿಂದ ಈಗಿನ ಪೀಳಿಗೆಗೆ ಪರಿಚಯಿಸುವ ಮಾತಾಗುತ್ತದೆ. ನಮ್ಮೇಲ್ಲರಿಗೆ ಖುಷಿ ವಿಷಯ ಏನೆಂದರೆ ಸರ್ಕಾರ ಕರ್ನಾಟಕ ರತ್ನ ನೀಡಿದ ಹಿನ್ನೆಲೆಯಲ್ಲಿ ಶ್ರೀನಿವಾಸ್ ಸೀನಣ್ಣ ಅವರು ಪ್ರತಿ ವರ್ಷಕ್ಕಿಂತಲೂ ಡಾ. ವಿಷ್ಣುವರ್ಧನ್ ಅವರ ಜಯಂತೋತ್ಸವ ಅದ್ದೂರಿಯಾಗಿ ವಿಜೃಂಭಣೆಯಿಂದ ಆಚರಿಸಿದ್ದು ಸಂತೋಷ ತಂದಿದೆ ಎಂದು ಹೆಚ್ ಆರ್ ಪ್ರಕಾಶ್ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಹಿಳಾ ರತ್ನ ಪತ್ರಿಕೆಯ ಪ್ರತಿನಿಧಿ ಲೀಲಾವತಿ, ಕಾಂಗ್ರೆಸ್ ಯುವ ನವಿನ್ ಮೋಹನ್ ಗೌಡ್ರು, ಕುಮಾರ್, ಚಿಕ್ಕಣ, ಮಾಯಣ್ಣ ಸೇರಿದಂತೆ ವಿಷ್ಣುವರ್ಧನ್ ಅಭಿಮಾನಿಗಳು, ಹೆಗ್ಗನಹಳ್ಳಿಯ ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್




