ಶಾಸಕ ದಿವಂಗತ ಕಾಕಾಸಾಹೇಬ ಪಾಟೀಲರ ಹೆಜ್ಜೆಯಲ್ಲಿ ಹೆಜ್ಜೇಯಿಟ್ಟು ಸಮಾಜ ಸೇವೆಗೆ ಬದ್ಧಳಾಗುವೆ:ಸುಪ್ರಿಯಾ ಪಾಟೀಲರ ಭರವಸೆ
ನಿಪ್ಪಾಣಿ: ಮತಕ್ಷೇತ್ರದ ಮಾಜಿ ಶಾಸಕ ದಿವಂಗತ ಕಾಕಾಸಾಹೇಬ ಪಾಟೀಲರು ತಮ್ಮ ಮತ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಬಡ ಜನತೆಯ ಸಂಕಷ್ಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜನಸೇವೆಯಲ್ಲಿ ಮುನ್ನಡೆದ ಅವರ ಹೆಜ್ಜೆಯಲ್ಲಿ ಹೆಜ್ಜೆ ಇಡುತ್ತ ಅವರು ತೋರಿದ ಮಾರ್ಗದಲ್ಲಿಯೇ ನಾನು ಮುನ್ನಡೆಯುತ್ತೇನೆ ಎಂದು ದಿವಂಗತ ಕಾಕಾಸಾಹೇಬ ಪಾಟೀಲರ ಪುತ್ರಿ ಸುಪ್ರಿಯಾ ಪಾಟೀಲ್ ಪಣತೊಟ್ಟಿದ್ದಾರೆ. ಅವರು ನಿಪ್ಪಾಣಿ ತಾಲೂಕಿನ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸೋಮವಾರ ಕಾರ್ಯಕರ್ತರೊಂದಿಗೆ ಸಮಾವೇಶ ನಡೆಸಿ BV 5 ನ್ಯೂಸ್ ವರದಿಗಾರರೊಂದಿಗೆ ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ವೀರ್ ಕುಮಾರ್ ಪಾಟೀಲ್, ಬುಡಾ ಅಧ್ಯಕ್ಷ ಲಕ್ಷ್ಮಣ್ ರಾವ್ ಚಿಂಗಳೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಕದಂ, ಸಹೋದರ ಸುಜಯ್ ಪಾಟೀಲರ ಮಾರ್ಗದರ್ಶನದಲ್ಲಿ ಮತಕ್ಷೇತ್ರದಲ್ಲಿಯ ಜನರ ಸಮಸ್ಯೆ ನೀಗಿಸಲು ಬದ್ಧರಾಗಿರುವುದಾಗಿ ತಿಳಿಸಿದರು. ಇದೇ ವೇಳೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಾಜೇಂದ್ರ ವಡ್ಡರ್ ಮಾತನಾಡಿದರು.
ಸಮಾರಂಭದಲ್ಲಿ ನಗರ ಸಭೆ ಸದಸ್ಯ ವಿಲಾಸ್ ಗಾಡಿ ವಡ್ಡರ್, ಬಾಳ ಸಾಹೇಬ್ ದೇಸಾಯಿ ಸರಕಾರ. ಸಭಾಧ್ಯಕ್ಷ ಡಾಕ್ಟರ್ ಬಸವರಾಜ್ ಗಿರಿ, ತಾಲೂಕಾ ಅನುಷ್ಠಾನ್ ಸಮಿತಿ ಅಧ್ಯಕ್ಷ ರಮೇಶ ಜಾಧವ, ಶಂಕರ ಪಾಟೀಲ, ಮಾಜಿ ನಾಗರಾಧ್ಯಕ್ಷ ವಿಜಯ ಶೇಟಕೆ, ಚಂದ್ರಕಾಂತ ಜಾಸುದ, ಸುಭಾಷ್ ಜಾಧವ, ಸಂಜಯ ಕಾಂಬಳೆ, ಯಾಸಿನ್ ಮನೇರ್ ಉಪಸ್ಥಿತರಿದ್ದರು.
ವರದಿ:ಮಹಾವೀರ ಚಿಂಚಣೆ




