ಚಿಕ್ಕೋಡಿ :ಪುನೀತ ರಾಜಕುಮಾರ ಅವರ ಪುತ್ಥಳಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಹಾಲಿನ ಅಭಿಷೇಕ ಮಾಡಿ ವಿಶೇಷವಾಗಿ ಪೂಜೆ ಮಾಡಿ ನಂತರ ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಾಲು ಹಣ್ಣು ಹಂಪಲು ಮತ್ತು ಸಿಹಿ ನೀಡಿ ವಿಭೃಂಜನೆಯಿಂದ ಡಾ.ಪುನೀತ ರಾಜಕುಮಾರ ಅವರ ೫೦ನೇ ಹುಟ್ಟು ಹಬ್ಬವನ್ನು ನಿನ್ನೆ ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಸಂಜು ಬಡಿಗೇರ ಮಾತನಾಡಿ ಡಾ.ಪುನೀತ ರಾಜಕುಮಾರ ಅವರು ಕನ್ನಡ ಚಿತ್ರ ರಂಗದ ಮೂಲಕ ಸಮಾಜಕ್ಕೆ ಒಳ್ಳೆಯ ಒಳ್ಳೆಯ ಸಂದೇಶವನ್ನು ನೀಡಿ ಅದಲ್ಲದೆ ಕಡು ಬಡವರು ಮತ್ತು ಅನಾಥ ಮಕ್ಕಳಿಗೆ ಅಂಧ ಮಕ್ಕಳಿಗೆ ಸಹಾಯ ಮಾಡುತ್ತಿದ್ದರು ಎಂದು ಹೇಳಿದರು.
ಇದೆ ಸಂಧರ್ಭದಲ್ಲಿ ಸಮಾಜ ಸೇವಕರಾದ ಚಂದ್ರಕಾಂತ ಹುಕ್ಕೇರಿಯವರು ಮಾತನಾಡಿ ಡಾ.ಪುನೀತ ರಾಜಕುಮಾರ ಅವರು ಸಮಾಜಕ್ಕೆ ಬಹಳಷ್ಟು ಕೊಡುಗೆಯನ್ನು ನೀಡಿದ್ದಲ್ಲದೆ ಕನ್ನಡ ಚಿತ್ರ ರಂಗದಲ್ಲಿ ನಟನಾಗಿದ್ದರೂ ಸಹ ನಿಜ ಜೀವನದಲ್ಲಿ ಉತ್ತಮ ನಟರಾಗಿ ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ ಇಂಥ ಒಬ್ಬ ಒಳ್ಳೆಯ ಕನ್ನಡ ನಟನನ್ನು ಕಳೆದುಕೊಂಡು ಸಮಾಜಕ್ಕೆ ನಷ್ಟವಾಗಿದೆ.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡಾ.ಪುನೀತ ರಾಜಕುಮಾರ ಅಭಿಮಾನಿ ಬಳಗದ ಅಧ್ಯಕ್ಷರಾದ ಅಮೋಲ ನಾವಿ. ಮತ್ತು ಸಂಜಯ ಪಾಟೀಲ. ಪ್ರತಾಪ ಪಾಟೀಲ. ದಾದಾ ಮಗದುಮ್. ರಫೀಕ ಪಠ್ಠಾಣ. ಬಾಪು ಕುತ್ತೆ. ಖಾನಪ್ಪಾ ಬಾಡಕರ. ದುಂಡಪ್ಪಾ ಬಡಿಗೇರ. ಸಂತೋಷ ಪೂಜಾರಿ ದುಂಡಪ್ಪಾ ಚೌಗಲಾ. ಶ್ರೀಕಾಂತ ಅಸೋದೆ. ಸಚೀನ ದೊಡಮನಿ. ಪುಂಡಲೀಕ ಟೋನಪೆ. ಅನೀಲ ನಾವಿ.ಭೀಮಾ ಶಿರಗಾಂವೆ. ರಮೇಶ ಡಂಗೇರ. ಸಿದ್ರಾಮ ಕರಗಾಂವೆ. ಸಿದ್ರಾಮ ನಸಲಾಪೂರೆ. ಎಲ್ಲ ಮನಸ್ಸುಗಳು ಡಾ.ಪುನೀತ ರಾಜಕುಮಾರ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಸೇರಿದ್ದರು.
ವರದಿ: ರಾಜು ಮುಂಡೆ