ಸಿಂಧನೂರು : ಸಂಯುಕ್ತ ಕಿಸಾನ್ ಮೋರ್ಚ್ ಶಂಭು ಗಡಿಯಲ್ಲಿ ನಡೆಯುತ್ತಿರುವ ಚಳವಳಿ ಬಗ್ಗೆ ಕೇಂದ್ರ ಸರ್ಕಾರ ಕೂಡಲೇ ಚರ್ಚೆ ಮಾಡಿ ಪರಿಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ರೈತ ಸಂಘ ಸಿಂಧನೂರು ತಾಸಿಲ್ದಾರ್ ಮುಖಾಂತರ ಸನ್ಮಾನ್ಯ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಅಮೀನ್ ಪಾಷಾ ದಿದ್ದಿಗಿ – ರಮೇಶ್ ಪಟೇಲ್ ಬೆರಗಿ ಮಾತನಾಡಿ,
ಕೇಂದ್ರ ಸರ್ಕಾರ ತಂದಿದ್ದ ರೈತ ವಿರೋಧಿ 03 ಕೃಷಿ ಕಾಯ್ದೆಗಳನ್ನು ವಾಪಸ್ ಪಡಿಬೇಕು ಎಂಎಸ್‌ಪಿ ಯನ್ನು ಕಾರ್ನಾತ್ಮಕವಾಗಿ ಜಾರಿ ಮಾಡಬೇಕು ಹಾಗೂ ವಿದ್ಯುಚ್ಛಕ್ತಿ ಖಾಸಗಿಕರಣ ಮಾಡಬಾರದೆಂದು ಒತ್ತಾಯಿಸಿ ದೆಹಲಿಯ ಹೊರವಲಯದಲ್ಲಿ 13 ತಿಂಗಳ ಕಾಲ ಸತತವಾಗಿ ಚಳುವಳಿ ನಡೆಸಲಾಯ್ತು ಆ ಸಂದರ್ಭದಲ್ಲಿ 700ಕ್ಕೂ ಹೆಚ್ಚು ಜನ ರೈತರು ಹೋರಾಟದಲ್ಲಿ ಹುತಾತ್ಮರಾದರು ನಂತರ ಕೇಂದ್ರ ಸರ್ಕಾರ ಚಳುವಳಿಗೆ ಮಣಿದು ರೈತ ವಿರೋಧಿ 03 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದು ಕಾನೂನು ಬದ್ಧವಾಗಿ ಜಾರಿ ಮಾಡುವುದಾಗಿ ವಿದ್ಯುಚ್ಛಕ್ತಿ ಖಾಸಗಿಕರಣ ಮಾಡುವುದಿಲ್ಲವೆಂದು ಲಿಖಿತ ಭರವಸೆ ಕೊಟ್ಟಿದ್ದರು ಬರವಸಿಕೊಟ್ಟ ಎರಡು ವರ್ಷ ಕಳೆದರೂ ಎಂಪಿಎಸ್, ಜಾರಿ ಮಾಡದ ಕಾರಣ ಪುನಃ ಹರಿಯಾಣದ ಶಂಭುಗಡಿಯಲ್ಲಿ 8 ತಿಂಗಳಿಂದ ರೈತರು ಚಳುವಳಿ ನಡೆಸಿದ್ದಾರೆ ರೈತ ನಾಯಕ ಜಗತ್ ಸಿಂಗ್ ದಲೈವಾಲರು 38 ದಿನಗಳಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು ಇವರ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ ದೇಶದ ಕೃಷಿ ಕ್ಷೇತ್ರದ ಅಭಿವೃದ್ಧಿಗೋಸ್ಕರ ಜೀವನ್ ಮರಣದ ಮಧ್ಯ ಹೋರಾಡುತ್ತಿದ್ದಾರೆ ಕೇಂದ್ರ ಸರ್ಕಾರ ಮತ್ತು ಪಂಜಾಬ್ ಸರ್ಕಾರ ಇವರ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿ ಪರಿಹಾರ ಕೊಟ್ಟು ಅಮೂಲ್ಯವಾದ ಅವರ ಜೀವ ಉಳಿಸಬೇಕೆಂದು ಈ ಮನವಿ ಮೂಲಕ ಒತ್ತಾಯ ಪಡಿಸುತ್ತೇವೆ ವಿಳಂಬವಾದಲ್ಲಿ ದೇಶ್ಯಾದಂತ ಚಳುವಳಿಯನ್ನು ತೀವ್ರ ಗೊಳಿಸಲಾಗುವುದೆಂದು ಪ್ರತಿಭಟನಾಕಾರರು ಎಚ್ಚರಿದ್ದಾರೆ
ಈ ಸಂದರ್ಭದಲ್ಲಿ, ಅಮೀನ್ ಪಾಷ ದಿದ್ದಗಿ, ಬಿ ಎನ್,ಯಾರದಿಹಾಳ, ರಮೇಶ್ ಪಟೇಲ್ ಬೇರಗಿ, ಚಿಟ್ಟಿ ಬಾಬು, ಇನ್ನು ಅನೇಕರಿದ್ದರು
ಬಸವರಾಜ ಬುಕ್ಕನಹಟ್ಟಿ