Ad imageAd image

ಆಲಮಟ್ಟಿ  ಡ್ಯಾಮ್ ಸುತ್ತಮುತ್ತಲು ಉದ್ಯಾನವನ ನಿರ್ಮಾಣಕ್ಕೆ ಹೊರಗುತ್ತಿಗೆ ನೀಡಿರುವ ಟೆಂಡರ್ ವಿರೋಧಿಸಿ ಧರಣಿಗೆ ಕುಳಿತ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರ ಸಂಘ”

Bharath Vaibhav
ಆಲಮಟ್ಟಿ  ಡ್ಯಾಮ್ ಸುತ್ತಮುತ್ತಲು ಉದ್ಯಾನವನ ನಿರ್ಮಾಣಕ್ಕೆ ಹೊರಗುತ್ತಿಗೆ ನೀಡಿರುವ ಟೆಂಡರ್ ವಿರೋಧಿಸಿ ಧರಣಿಗೆ ಕುಳಿತ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರ ಸಂಘ”
WhatsApp Group Join Now
Telegram Group Join Now

ಆಲಮಟ್ಟಿ : ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕು ಆಲಮಟ್ಟಿ ಡ್ಯಾಮ್ ಸುತ್ತಮುತ್ತಲು ಉದ್ಯಾನವನ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಿರುವ ಟೆಂಡರನ್ನು ಕೂಡಲೇ ರದ್ದುಪಡಿಸಬೇಕೆಂದು,
ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ದಿನಗೂಲಿ ನೌಕರ ಸಂಘದವರು ಧರಣಿ ಪ್ರಾರಂಭಿಸಿದ್ದಾರೆ.

ಸುಮಾರು 25 ವರ್ಷಗಳಿಂದ ಕೂಲಿ ಕೆಲಸ ನಿರ್ವಹಿಸುತ್ತಾ ಉದ್ಯಾನವನಗಳನ್ನು ವಿವಿಧ ಜಿಲ್ಲೆ ರಾಜ್ಯಗಳಿಂದ ಪರವಾಸಿಗರು ನೋಡುವ ಹಾಗೆ ಮಾಡಿದ್ದೇವೆ, ವನ್ಯಜೀವಿಗಳು ವಾಸವಿರುವ ಗುಡ್ಡದಲ್ಲಿ, ಪ್ರಾಣದ ಹಂಗನ್ನು ಲೆಕ್ಕಿಸದೆ, ಉದ್ಯಾನವನವನ್ನು ಮಾಡಿದ್ದೇವೆ ನಾವು ಮುಳುಗಡೆ ಸಂತ್ರರು, ಟೆಂಡರನ್ನು ರದ್ದುಪಡಿಸಿ, ದಿನಗೂಲಿ ನೌಕರರಿಗೆ ಅನುಕೂಲ ಮಾಡಿಕೊಡಿ ಎಂದು ವಿರುಪಾಕ್ಷಿ ಮಾದರ್ ಹೇಳಿದರು.
ಧರಣಿಯಲ್ಲಿ ರೈತ ಮುಖಂಡ ಅರವಿಂದ ಕುಲಕರ್ಣಿ, ವಿರುಪಾಕ್ಷಿ ಮಾದರ್, ಕಾಶಿನಾಥ ಬಿಂಗೆ, ಶಂಕರ್ ಪಡಸಲಗಿ, ಚೆನ್ನಪ್ಪ, ಮಹೇಶ್, ಗೋವಿಂದ ವಡ್ಡರ್ ಹಲವಾರು ದಿನಗೂಲಿ ನೌಕರರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳನ್ನು ಮಹೇಶ್ ಪಾಟೀಲ್,ನಿಡಗುಂದಿ ಠಾಣೆಯ ಸಿಪಿಐ ಅಶೋಕ್ ಚವಾಣ್, ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ವರದಿ :ಅಲಿ ಮಕಾನದಾರ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!