
‘ಪರ್ಪೆಕ್ಟ್ 11’ ತಲಾಶದಲ್ಲಿದೆ ಭಾರತ ಟೀಮ್ ಮ್ಯಾನೆಜ್ ಮೆಂಟ್
ನವದೆಹಲಿ: ಇಂಗ್ಲೆಂಡ್ ವಿರುದ್ಧ ನಡೆಯುವ ಕಡೆಯ ಹಾಗೂ ಐದನೇ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಭಾರತ ‘ಪರ್ಪೆಕ್ಟ್ 11’ ತಲಾಶದಲ್ಲಿದೆ. ಮ್ಯಾಂಚೆಸ್ಟರ್ ನಲ್ಲಿ ಮುಗಿದ ನಾಲ್ಕನೇ ಟೆಸ್ಟ್ ನಲ್ಲಿ ಭಾರತ ಸೋಲುವ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಯಶಸ್ವಿಯಾಯಿತು. ಆದರೂ ಪಂದ್ಯವನ್ನು ಗೆದ್ದು ಸರಣಿಯನ್ನು 2-2 ರಿಂದ ಸಮ ಮಾಡಿಕೊಳ್ಳುವ ಉದ್ದೇಶವಂತೂ ಈಡೇರಲಿಲ್ಲ.

ಆದರೆ ಐದನೇ ಹಾಗೂ ಕಡೆಯ ಟೆಸ್ಟ್ ಪಂದ್ಯದಲ್ಲಾದರೂ ಬಲಿಷ್ಠ 11 ಸದಸ್ಯರನ್ನು ಆಯ್ಕೆ ಮಾಡಿ ಪಂದ್ಯವನ್ನು ಗೆದ್ದು, ಕನಿಷ್ಠ ಸರಣಿಯನ್ನು 2-2 ರಿಂದ ಸಮ ಮಾಡಿಕೊಳ್ಳುವ ಉದ್ದೇಶದಿಂದ ಕಣಕ್ಕೆ ಇಳಿಯಲಿದೆ.
ಕಾಂಬೋಜ, ಶಾರ್ದೂಲ್ ಕೋಕ್: ಈ ನಿಟ್ಟಿನಲ್ಲಿ ಭಾರತದ ವೇಗದ ಬೌಲರ್ ಗಳನ್ನು ಬದಲಾಯಿಸುವ ಉದ್ದೇಶವನ್ನು ಟೀಮ್ ಮ್ಯಾನೆಜ್ ಮೆಂಟ್ ಹೊಂದಿದೆಯಂತೆ. ಭಾರತದ ಹಾರಿ ನೇರವಾಗಿ ಪ್ಲೆಯಿಂಗ್ 11 ಸೇರಿದ್ದ ಕಾಂಬೋಜ್ ನಾಲ್ಕನೇ ಟೆಸ್ಟ್ ನಲ್ಲಿ ಪರಿಣಾಮಕಾರಿಯಾಗಲೂ ವಿಫಲರಾಗಿದ್ದರು. ಅಲ್ಲದೇ ಶಾರ್ದೂಲ್ ಠಾಕೂರ ಕೂಡ ಪರಿಣಾಮಕಾರಿ ಬೌಲಿಂಗ್ ಮಾಡಿರಲಿಲ್ಲ. ಹೀಗಾಗಿ ಈ ಇಬ್ಬರನ್ನು ಕೈ ಬಿಟ್ಟು, ಇವರ ಸ್ಥಾನದಲ್ಲಿ ಪ್ರಸಿದ್ದ ಕೃಷ್ಣ ಹಾಗೂ ಆಕಾಶ ದೀಪ್ ಅವರನ್ನು ಆಡಿಸುವ ಇರಾದೆಯನ್ನು ಟೀಮ್ ಮ್ಯಾನೆಜ್ ಮೆಂಟ್ ಹೊಂದಿದೆ.
ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಕರುಣ್ ನಯ್ಯರ ಬದಲಿಗೆ ಸ್ಥಾನ ಪಡೆದಿದ್ದ ಸಾಯಿ ಸುದರ್ಶನ್ ಅವರನ್ನು ಆಡಿಸಬೇಕೆ? ಅಥವಾ ಮತ್ತೇ ಕರುಣ್ ನಯ್ಯರ್ ಗೆ ಅವಕಾಶ ನೀಡಬೇಕೆ? ಎಂಬ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ.




