Ad imageAd image

ಅದ್ದೂರಿಯಾಗಿ ಬಸವ ಜಯಂತಿ ಆಚರಣೆ

Bharath Vaibhav
ಅದ್ದೂರಿಯಾಗಿ ಬಸವ ಜಯಂತಿ ಆಚರಣೆ
WhatsApp Group Join Now
Telegram Group Join Now

ಗೋಕಾಕ : ಗೋಕಾಕ ತಾಲೂಕಿನ ವಿವಿದ ಗ್ರಾಮಗಳಲ್ಲಿ ಬಸವ ಜಯಂತಿಯನ್ನು ಭಕ್ತಿಭಾವದೊಂದಿಗೆ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ತಾಲೂಕಿನ ಕೊಣ್ಣೂರ ,ಪಾಮಲದಿನ್ಮಿ, ಘಟಪ್ರಭಾ ,ದುಪಧಾಳ ಗ್ರಾಮದಲ್ಲಿ ಬಸವೇಶ್ವರ ಪಲ್ಲಕ್ಕಿ ಮತ್ತು ಎತ್ತಿನ ಬಂಡಿಯಲ್ಲಿನ ಬಸವೇಶ್ವರ ಭಾವ ಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಊರಲ್ಲಿ ಮೆರವಣಿಗೆ ಮಾಡಿದರು.

ಕೊಣ್ಣೂರಲ್ಲಿನ ರೈತರೆಲ್ಲರೂ ತಮ್ಮ ತಮ್ಮ ಎತ್ತುಗಳಿಗೆ ಬಣ್ಣ ಬಣ್ಣಗಳಿಂದ ಶೃಂಗಾರ ಮಾಡಿ ಊರಿನ‌ ಪ್ರಮುಖ ಬೀದಿಗಳಲ್ಲಿ ಸುತ್ತಾಡಿ ಅದ್ದೂರಿಯಾಗಿ ಮೆರವಣಿಗೆ ಮಾಡಿ ಬಸವ ಜಯಂತಿ ಆಚರಿಸಿದರು, ಇದರ ಜೊತೆಯಲ್ಲಿ ಡಿಜೆ ಹಚ್ವಿ ಬಸವೇಶ್ವರ ಹಾಡುಗಳಿಗೆ ದಾರಿಯುದ್ದಕ್ಕಯುವಕರು ಮೈಮರೆತು ಹೆಜ್ಜೆ ಹಾಕಿದರು.ನಗರದ ಪ್ರಮುಖ ಬೀದಿಗಳಾದ ಜೈನಗಲ್ಲಿ, ಅಂಬೇಡ್ಕರ ನಗರ, ವಾಲ್ಮೀಕಿ ಚೌಕಗಳಲ್ಲಿ ಸುತ್ತಾಡಿ ಸರಳವಾಗಿ ಮೆರವಣಿಗೆ ಮಾಡಿದರು.

ಇನ್ನು ಪಾಮಲದಿನ್ನಿಯಲ್ಲಿ ಜಾಜ ಪತಂಗ ಬಾರಿಸುತ್ತ ಯುವಕರು,ಸಣ್ಣ ಮಕ್ಕಳು ಕೈಯಲ್ಲಿ ಬಸವೇಶ್ವರ ದ್ವಜ ಹಿಡಿದು ಜೈಕಾರ ಕೂಗುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ರೈತರೆಲ್ಲರೂ ತಮ್ಮ ಎತ್ತುಗಳಿಗೆ ಬಣ್ಣಗಳನ್ನು ಹಚ್ಚಿ ಶೃಂಗಾರ ಮಾಡಿ ಮೆರವಣಿಗೆ ಮಾಡಿ ಬಸವಜಯಂತಿ ಆಚರಿಸಿದರು.ಈ ಸಂದರ್ಭದಲ್ಲಿ ಸ್ಥಳಿಯ ಮುಖಂಡರುಗಳು,ಯುವಕರು ಉಪಸ್ಥಿತರಿದ್ದು ಕಮಿಟಿಯ ವತಿಯಿಂದ ಎಲ್ಲರಿಗೂ ತಂಪು ಪಾನಿಯ ವ್ಯವಸ್ಥೆ ಮಾಡಿದ್ದರು.

ವರದಿ:ಮನೋಹರ ಮೇಗೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!