ಕಲಬುರಗಿ:-ಕಲಬುರಗಿಯಲ್ಲಿ ಒಳಮೀಸಲಾತಿ ಸಲುವಾಗಿ ಕಲ್ಬುರ್ಗಿಯಲ್ಲಿ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಛೇರಿವರಿಗೆ ಅರೆ ಬತ್ತಲೆಯಾಗಿ ಮಾದಿಗ ಸಮಾಜದ ಮುಖಂಡರು ವಿವಿಧ ತಾಲೂಕಿನಿಂದ ಆಗಮಿಸಿ ಪ್ರತಿಭಟನೆ ಮಾಡಲಾಯಿತು ಕಾರ್ಯಕ್ರಮದ ಉದ್ದೇಶ ಒಳಮೀಸಲಾತಿ ಜಾರಿಗಾಗಬೇಕು ಈಗಾಗಲೇ ಜಾರಿಗೆ ಆಗಿರುವ ಹುದ್ದೆಗಳನ್ನು ತಡೆಗಟ್ಟಬೇಕು.

ಜಾತಿಗಣತಿಯನ್ನು ಅದನ್ನು ಕೈ ಬಿಡಬೇಕು 2011ರ ಜಾತಿಗಣತಿಯನ್ನು ಆಧಾರದ ಮೇಲೆ ಒಳಮಿಸಲಾತಿಯನ್ನು ಜಾರಿಗೆ ಆಗಬೇಕು ಸುಪ್ರೀಂ ಕೋರ್ಟ್ನ ಆದೇಶ ಇದ್ರೂ ಕೂಡ ಕಾಂಗ್ರೆಸ್ ಸರ್ಕಾರ ಉಪಸಮಿತಿ ಮಾಡಿರುವುದು ಜಿಲ್ಲಾ ಮಾದಿಗ ಸಂಘಟನೆ ಒಕ್ಕೂಟದಿಂದ ಖಂಡಿಸುತ್ತೇವೆ ಅದರಂತೆ ಡಿಸೆಂಬರ್ ಒಳಗಡೆ ಒಳಮೀಸಲಾತಿ ಜಾರಿಗೆ ಆಗದೆ ಇದ್ದರೆ ಕಲ್ಬುರ್ಗಿ ಬಂದ್ ಕರೆ ನೀಡುತ್ತೇವೆ ಮತ್ತು ಉಗ್ರವಾದ ಹೋರಾಟ ಮಾದಿಗರು ಇಡೀ ರಾಜ್ಯದಾದಂತ ರಸ್ತೆ ಇಳಿದು ಹೋರಾಟಕ್ಕೆ ಸಿದ್ದರಾಗಿರುತ್ತವೆ.
ವರದಿ :-ಸುನೀಲ್ ಸಲಗರ




