ಡಾ ಚನ್ನಮಲ್ಲ ಮಹಾಸ್ವಾಮಿಗಳು ಹಾಗೂ ಭಕ್ತರು ಮಹಾತ್ಮರ ಜೀವನ್ ದರ್ಶನ, ಕರಪತ್ರ ಬಿಡುಗಡೆ ಗೊಳಿಸಿದರು.
ಕಂದಗಲ್ಲ :ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವು ಶ್ರಾವಣ ಮಾಸದ ಅಂಗವಾಗಿ ಪುರಾಣ ಪ್ರವಚನ ಕಾರ್ಯಕ್ರಮ ನೆಡೆಯಲಿದೆ. ಈ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಶ್ರೀಮಠದಲ್ಲಿ ಶ್ರೀಗಳ ನೇತೃತ್ವದಲ್ಲಿ ಕರೆಯಲಾಗಿತ್ತು ಸಭೆಯಲ್ಲಿ ” ಈ ಸಲದ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಮಹಾತ್ಮರ ಜೀವನ ದರ್ಶನ” ಕಾರ್ಯಕ್ರಮ ಏರ್ಪಡಿಸಲಾಗಿದ್ದು ಅದರ ಕರಪತ್ರಗಳನ್ನು ಗ್ರಾಮದ ಸುವರ್ಣಗಿರಿ ಶ್ರೀ ರುದ್ರುಸ್ವಾಮಿಮಠದ ಡಾ ಚನ್ನಮಲ್ಲ ಮಹಾಸ್ವಾಮೀಗಳು ಹಾಗೂ ಭಕ್ತರು ಬಿಡುಗೋಡೆಗೊಳಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಕಂದಗಲ್ಲ ಗ್ರಾಮಕ್ಕೆ ಇದೊಂದು ವಿಶಿಷ್ಟ ರೀತಿಯ ವಿಭಿನ್ನವಾದ ಭಕ್ತಿ ಪ್ರಧಾನ ಕಾರ್ಯಕ್ರಮ ವಾಗಿದ್ದು ತಿಂಗಳ ಪರ್ಯಂತ ಪ್ರತಿದಿನ ಒಬ್ಬಬ್ಬ ಮಹಾತ್ಮರ ಜೀವನ್ ದರ್ಶನವನ್ನ ತಮ್ಮ್ ಮುಂದೆ ಪ್ರಸ್ತುತಪಡಿಸ ಲಾಗುವದು ಇದನ್ನು ಪ್ರತಿಯೊಬ್ಬರೂ ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಿಡಿಸಿಕೊಂಡು ಉತ್ತಮವಾದ ಜೀವನ ನೆಡೆಸಬೇಕು, ಕಾರಣ ಕಂದಗಲ್ಲ ಹಾಗೂ ಸುತ್ತಮುತ್ತಲಿನ ಎಲ್ಲ ಭಕ್ತರು ಈ ಭಕ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಆಶೀರ್ವಚನ ನೀಡಿದರು.
ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದಸಾಬ ಭಾವಿಕಟ್ಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸಭೆಯಲ್ಲಿ ಮಕ್ಕಳು ಮಹಿಳೆಯರು ಯುವಕರು ಹಿರಿಯರು ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.
ವರದಿ: ದಾವಲ್ ಶೇಡಂ




