ಮನೆಮುರುಕ ಮಟ್ಕಾ ಸಹವಾಸ: ಬಡ ಜನರ ಹೊಟ್ಟೆಗೆ ಉಪವಾಸ
ಹಾವೇರಿ: ಜಿಲ್ಲೆಯ ಹಾನಗಲ್ ಸವಣೂರು ರಟ್ಟಿಹಳ್ಳಿ ಹಿರೇಕೆರೂರು ರಾಣೆಬೆನ್ನೂರು ಬ್ಯಾಡಗಿ ಹಾಗೆ ಶಿಗ್ಗಾಂವಿ ತಾಲೂಕಿನಾದ್ಯಂತ ಮಟ್ಕಾ ದಂಧೆಯ ನರ್ತನ ಬಲು ಜೋರಾಗಿದೆ.
ಇಲ್ಲಿಯ ಶಾಸಕರಾದ ಯಾಶೀರ್ ಅಹ್ಮದ್ ಖಾನ್ ಪಠಾಣ್ ರವರು ಅದಿಕಾರ ವಹಿಸಿಕೊಂಡ ಬಳಿಕ ನಮ್ಮ ಮತಕ್ಷೇತ್ರದಲ್ಲಿ ಯಾವುದೇ ಅಕ್ರಮ ದಂದೆ ನಡೆಯದ ಹಾಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಹೇಳಿದ ಮಾತು ಮರೆತು ಹೋದಂತಾಗಿದೆ.
ಶಿಗ್ಗಾಂವಿಯ ಪೊಲೀಸ್ ಅಧಿಕಾರಿಗಳಂತೂ ಮೂಕಜಾನರಂತೆ ವರ್ತಿಸುತ್ತಿದ್ದಾರೆ
ಶಾಸಕರು ಕೂಡ ಇದರ ಬಗ್ಗೆ ಗಮನ ಹರಿಸುತ್ತಿಲ್ಲ
ಸಾರ್ವಜನಿಕರಿಗೆ ಹಣದ ಆಮಿಷ ಒಡ್ಡುವ ಮೂಲಕ ಮಟ್ಕಾ ದಂಧೆಯಲ್ಲಿ ಹಗಲು ದರೋಡೆಗೆ ಇಳಿದಿರುವುದನ್ನು ಕಂಡರೆ ಹಾವೇರಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಅಕ್ಷರಶಃ ಅನಾಥವಾಗಿದೆ.
ಶಿಗ್ಗಾಂವಿ ಮತ್ತು ತಡಸನಲ್ಲಿ ಹಲವು ಕಡೆ ಸುರೇಶ್ ಗೌಂಡಿ ಹಾನಗಲ್ ತಾಲೂಕಿನ ಹುಲಗಿನಕೊಪ್ಪ ಮೂಲದ ವ್ಯಕ್ತಿ ಹಾಗೆ ಮುಂಜುನಾತ ಪಾಟೀಲ್ ಹುಬ್ಬಳ್ಳಿ ಮೂಲದ ವ್ಯಕ್ತಿ. ನಾಗಪ್ಪ ತಡಸ ಗ್ರಾಮದ ನಿವಾಸಿ. ಶರ್ಮಾ ಶಿಗ್ಗಾಂವಿಯ ಮೂಲದ ನಿವಾಸಿ ಈ ದಂದೆಯಲ್ಲಿ ಮೂಲ ವ್ಯಕ್ತಿಗಲಾಗಿದ್ದಾರೆ
ಮಟ್ಕಾದಿಂದ ಮೂರಾಬಟ್ಟೆಯಾದ ಜನರ ಜೀವನಕ್ಕೆ ಶಿಗ್ಗಾಂವಿ ಪೊಲೀಸ್ ಇಲಾಖೆಯು ಕೂಡ ಒಂದು ರೀತಿಯಲ್ಲಿ ಕಾರಣೀಭೂತವಾಗಿದೆ.
ಇನ್ನಾದರೂ ಶಿಗ್ಗಾಂವಿ ಸವಣೂರು ಮತ ಕ್ಷೇತ್ರದ ಶಾಸಕರಾದ ಯಾಶಿರ್ ಅಹ್ಮದ್ ಖಾನ್ ಪಠಾಣ್ ರವರು ಅಧಿಕಾರಿಗಳಿಗೆ ಈ ಅಕ್ರಮ ದಂದೆಯ ಬಗ್ಗೆ ಗಮನ ಹರಿಸುವಂತೆ ಈ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳವಂತ್ತೆ ಸೂಚಿಸುತ್ತಾರೋ ಇಲ್ಲವೋ ನೋಡಬೇಕಿದೆ.