ಹುಕ್ಕೇರಿ: ತಾಲೂಕಿನ ಜನರ ಪ್ರೀತಿ ವಿಶ್ವಾಸದಿಂದ ಕಳೆದ ನಾಲ್ಕು ದಶಕಗಳಿಂದ ನಮ್ಮ ಕುಟುಂಬ ಹುಕ್ಕೇರಿ ಮತಕ್ಷೇತ್ರವನ್ನು ಪ್ರತಿನಿಧಿಸುತ್ತಿದೆ ಕ್ಷೇತ್ರದ ಜನರು ಮನೆ ಮಕ್ಕಳಾಗಿ ನಾವು ದುಡಿಯುತ್ತಿದ್ದೇವೆ ನಮ್ಮ ಅವರ ವಿಶ್ವಾಸ ಕೌಟುಂಬಿಕವದಾಗಿದ್ದೆ ಎಂದು ವಿದ್ಯುತ್ ಸರಕಾರಿ ಸಂಘದ ನಿರ್ದೇಶಕರ ಪೃಥ್ವಿ ಕತ್ತಿ ಹೇಳಿದರು.

ಶುಕ್ರವಾರದಂದು ತಾಲೂಕಿನ ಶಿರಹಟ್ಟಿ ಕೆ. ಡಿ. ಯ ಬೆಲ್ಲದ ತೋಟ ಮತ್ತು ಶಿರಹಟ್ಟಿ ಬಿ ಕೆ ಯ ಹೊಸಮನಿ ತೋಟದಲ್ಲಿ ಹೆಚ್ಚುವರಿ ಯಾಗಿ ಅಳವಡಿಸಿ 63 ಕೆ ವ್ಹಿ ನೂತನ ಎರಡು ಟಿ ಸಿ ಉದ್ಘಾಟಿಸಿ ಮಾತನಾಡಿದರು.
ಮುಂಬರುವ ತಿಂಗಳಲ್ಲಿ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕರ ಮಂಡಳಿಯ ಚುನಾವಣೆ ನಡೆಯಲಿದ್ದು ಎಂದಿನಂತೆ ನಮ್ಮ ಪೆನಲನ್ನು ಸಂಘದ ಸದಸ್ಯರು ಬೆಂಬಲಿಸುತ್ತಿದ್ದಾರೆಂದು ಚುನಾವಣೆ ಇದ್ದ ಮೇಲೆ ಆರೋಪ ಪ್ರತ್ಯಾರೋಪ ಇರುವುದು ಸ್ವಾಭಾವಿಕ ಆದರೆ ಕ್ಷೇತ್ರದ ಜನರ ಸ್ವಭಾವ ನಮಗೆ ಗೊತ್ತಿದೆ ನಮ್ಮ ಸ್ವಭಾವ ಅವರಿಗೆ ಗೊತ್ತಿದೆ ಅದರಿಂದ ನಮ್ಮ ಗೆಲವು ನಿಶ್ಚಿತ ವೆಂದರು.

ಸದ್ಯಸರು ಮತ್ತು ಗ್ರಾಹಕರಿಗೆ ಯಾವ ಹೊರೆಯಾಗದಂತೆ ಸಂಘ ಉಳಿಸಿ ಬೆಳೆಸಿದ್ದೇವೆ ಮತ್ತು 20 ವರ್ಷದಿಂದ ಅವಿರೋಧ ಆಯ್ಕೆ ಆಗುತ್ತಾ ಬಂದಿದ್ದ ಸಂಘಕ್ಕೆ ಈ ಬಾರಿ ಚುನಾವಣೆ ನಡೆಯುವುದು ನಿಶ್ಚಿತವೆಂದರು ನಮ್ಮ ತಂದೆ ಮಾಜಿ ಸಂಸದ ರಮೇಶ್ ಕತ್ತಿ ಮತ್ತು ಶಾಸಕ ನಿಖಿಲ್ ಕತ್ತಿ ಅವರ ಜನಪರ ಆಡಳಿತವೇ ನಮಗೆ ಶ್ರೀರಕ್ಷೆಯನ್ನು ತಿಳಿಸಿದರು ಇದೇ ಸಂದರ್ಭದಲ್ಲಿ ಪೃಥ್ವಿ ಕತ್ತಿಯವರನ್ನು ತನು ಸನ್ಮಾನಿಸಿದ್ದರು.
ವಕೀಲ ಡಿ ಕೆ ಅವರಗೋಳ, ಆನಂದ ದಪ್ಪಾಧೂಳಿ, ಅಣ್ಣಪ್ಪಾ ಬ್ಯಾಳಿ, ರಾಮಣ್ಣ ಗೋಟರೆ, ಸಂಜು ಹತ್ತರವಾಟ, ಶೀತಲ್ ಬ್ಯಾಳಿ, ಶ್ರೀಶೈಲ್ ಶಿರಗಾಂವಿ, ಯಲ್ಲಪ್ಪ ಡಪರಿ, ವಿಠ್ಠಲ ಹೊಸಮನಿ, ಸೈಯದ್ ಅಮ್ಮಣಿಗೆ, ಶಿವಾನಂದ ಡಂಗ, ಮಲಗೌಡ ಪಾಟೀಲ, ಜೈಪಾಲ, ಹುಲ್ಯಾಗೋಳ, ಗುಲಾಬ ಅಮ್ಮಣಿಗೆ, ಶಂಕರ ಗುಡುಸಿ, ಮಂಜುನಾಥ ಪಡದಾರ, ಹಾಗೂ ಮುಂತಾದವರಿದ್ದರು.
22 ಎಚ್ ಯು ಕೆ 1 ತಾಲೂಕಿನ ಶಿರಹಟ್ಟಿಕೆ ಡಿ ಮತ್ತು ಶಿರಹಟ್ಟಿ ಬಿ ಕೆ ಅಳವಡಿಸಿದ 63 ಕೆ ವ್ಹಿ ನೂತನ ಟಿ ಸಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪೃಥ್ವಿ ಕತ್ತಿಯವರನ್ನು ಸನ್ಮಾನಿಸಿದರು ಡಿ ಕೆ ಅವರಗೋಳ ಆನಂದ ದಪ್ಪಾಧೂಳಿ, ಅನ್ನಪ್ಪಾ ಬ್ಯಾಳಿ, ರಾಮಣ್ಣ ಗೋಟೂರೆ, ಸಂಜು ಹತ್ತರವಾಟ ಇನ್ನಿತರು ಉಪಸ್ಥಿತರಿದ್ದರು.
ವರದಿ: ಶಿವಾಜಿ ಎನ್ ಬಾಲೆಶಗೋಳ




