ಪಾರ್ಟಿಗೆ ಬಂದಿದ್ದ ಪ್ರಿಯತಮನಿಗೆ ಚಾಕು ಇರಿದ ಪ್ರಿಯತಮೆ 

Bharath Vaibhav
ಪಾರ್ಟಿಗೆ ಬಂದಿದ್ದ ಪ್ರಿಯತಮನಿಗೆ ಚಾಕು ಇರಿದ ಪ್ರಿಯತಮೆ 
WhatsApp Group Join Now
Telegram Group Join Now

ಹಾಸನ: ಪಾರ್ಟಿಗೆ ಬಂದಿದ್ದ ಪ್ರಿಯತಮನಿಗೆ ಪ್ರಿಯತಮೆ ಚಾಕುವಿನಿಂದ ಇರಿದ ಘಟನೆ ನಗರದ ಬಿ.ಎಂ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಬಳಿ ನಡೆದಿದೆ.

ಮನುಕುಮಾರ್ (25) ಚಾಕು ಇರಿತಕ್ಕೊಳಗಾದ ಯುವಕ. ಈತ ಎ.ಗುಡುಗನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಈತನಿಗೆ ಪ್ರಿಯತಮೆ ಭವಾನಿ ಚಾಕುವಿನಿಂದ ಮನುಕುಮಾರ್ ಹಾಗೂ ಭವಾನಿ ಒಂದೇ ಗ್ರಾಮದವರಾಗಿದ್ದು, ಇಬ್ಬರೂ ಜೊತೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದರು. ಬಳಿಕ ಪರಸ್ಪರ ಪ್ರೀತಿಸುತ್ತಿದ್ದ ಇವರಿಬ್ಬರು ಕೆಲ ದಿನಗಳಿಂದ ದೂರವಾಗಿದ್ದರು ಎಂದು ತಿಳಿದು ಬಂದಿದೆ.

ಇನ್ನು ಹೊಸ ವರ್ಷಾಚರಣೆಗೆಂದು ಮನುಕುಮಾರ್ ತನ್ನ ಸ್ನೇಹಿತರ ಜೊತೆ ಮಂಗಳವಾರ ರಾತ್ರಿ ಖಾಸಗಿ ಹೋಟೆಲ್‍ಗೆ ಬಂದಿದ್ದ. ಇತ್ತ ಯುವತಿ ಮನುಕುಮಾರ್‌ಗೆ ಪದೇ ಪದೇ ಕರೆ ಮಾಡಿದ್ದಾಳೆ. ಬಳಿಕ ತಡರಾತ್ರಿ 12:30ರ ವೇಳೆಗೆ ಹೋಟೆಲ್ ಬಳಿ ಬಂದು ಅಲ್ಲೇ ಬಿದ್ದಿದ್ದ ಪಾಸ್ ಹಾಕಿಕೊಂಡು ಗೇಟ್ ಒಳಗೆ ಪ್ರವೇಶಿಸಿದ್ದಾಳೆ.

ಅಷ್ಟರಲ್ಲಿ ಗೇಟ್ ಬಳಿ ಮನುಕುಮಾರ್ ಬಂದಿದ್ದಾನೆ. ಆಗ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಈ ವೇಳೆ ಸ್ನೇಹಿತರು ಜಗಳ ಬಿಡಿಸಲು ಮುಂದಾಗಿದ್ದಾರೆ. ಅಷ್ಟರಲ್ಲೇ ಯುವತಿ ಆತನಿಗೆ ಏಕಾಏಕಿ ಚಾಕು ಇರಿದಿದ್ದಾಳೆ.

ಗಾಯಗೊಂಡಿರುವ ಯುವಕನನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಕೆ.ಆರ್.ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!