ಮಹಾರಾಷ್ಟ್ರ : ಬೆಳಗಾವಿಯಲ್ಲಿ ಕನ್ನಡಿಗ ಕಂಡಕ್ಟರ್ ಮೇಲೆ MES ಪುಂಡರು ಹಲ್ಲೆ ನಡೆಸಿದ ಕೇಸ್ ಹಸಿಯಾಗಿರುವ ಬೆನ್ನಲ್ಲೇ ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರನಾಯ್ಕ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
MSRTC ಬಸ್ ಗಳಲ್ಲಿ ಮಾರ್ಷಲ್ ಗಳನ್ನ ನೇಮಕ ಮಾಡುವ ಕುರಿತು ಸಚಿವ ಪ್ರತಾಪ್ ಸರನಾಯ್ಕ್ ತೀರ್ಮಾನ ಮಾಡಿದ್ದಾರೆ.ಚಿತ್ರದುರ್ಗದಲ್ಲಿ ಮಹಾರಾಷ್ಟ್ರ ಬಸ್ ತಡೆದು ಡ್ರೈವರ್ ಮೇಲೆ ಮಸಿ ಬಳಿದ ಕಾರಣ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ.
ಪ್ರಮುಖವಾಗಿ ರಾತ್ರಿ ಸಂಚಾರ ನಡೆಸುವ ಬಸ್ ಗಳಲ್ಲಿ ಮಾರ್ಷಲ್ ಗಳನ್ನು ನೇಮಿಸುವ ಮೂಲಕ ತನ್ನ ಸಿಬ್ಬಂದಿ ಹಾಗೂ ಬಸ್ ರಕ್ಷಣೆಗೆ ಮಹಾರಾಷ್ಟ್ರ ಹೊಸ ಪ್ಲಾನ್ ಹಾಕಿಕೊಂಡಿದೆ.
ಸದ್ಯ ಬೆಳಗಾವಿ ಗಡಿಭಾಗದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂಡತಿದ್ದು, ಎರಡೂ ರಾಜ್ಯದ ನಡುವೆ ಬಸ್ ಸಂಚಾರ ಸ್ಥಗಿತಗೊಂಡಿದೆ. ಬಹುತೇಕ ಇವತ್ತು ಸಂಜೆಯಿಂದ ಎಂದಿನಂತೆ ಬಸ್ ಸಂಚಾರ ಆರಂಭವಾಗಲಿದೆ.
ಕರ್ನಾಟಕದ ಅನೇಕ ಬಸ್ ಗಳನ್ನು ತಡೆದು ಮಹಾಪುಂಡರು ದಾಳಿ ಮಾಡಿದ್ದು , ಈಗಾಗಲೇ ಸಚಿವ ರಾಮಲಿಂಗಾರೆಡ್ಡಿ ಮಹಾರಾಷ್ಟ್ರ ಸರಕಾರದ ಹಿರಿಯ ಅಧಿಕಾರಿಗಳ ಜತೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದ್ದಾರೆ.