ಶಿರಸಿ: ಹೌದು ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿಗೆ ಅದ್ಯಾಕೋ ಏನೋ ಗೊತ್ತಾಗುತ್ತಿಲ್ಲ ದಿನದಿಂದ ದಿನಕ್ಕೆ ಹೊಸ ಸಮಸ್ಯೆಗಳು ಬೆಳಕಿಗೆ ಬರುತ್ತಿವೆ. ಈಗ ಲೇಟೆಸ್ಟ್ ಸುದ್ದಿ ಏನಪ್ಪಾ ಅಂದ್ರೆ ಶಿರಸಿ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಪ್ರವೇಶ ಪಡೆಯುವ ಮುಖ್ಯ ರಸ್ತೆಯು ತುಂಬಾನೇ ಹದಗೆಟ್ಟಿದ್ದು, ಇಳಿಜಾರು ಆಗಿರುವುದರಿಂದ ಈ ಮುಖ್ಯ ರಸ್ತೆಯಲ್ಲಿ ದಿನನಿತ್ಯ ಹಾಗೂ ಕ್ಷಣ ಕ್ಷಣಕ್ಕೂ ಈ ಆಸ್ಪತ್ರೆಗೆ ಬರುವ ಆಂಬುಲೆನ್ಸ್ ಗಳು ಹಾಗೂ ರೋಗಿಗಳನ್ನು ತೆಗೆದುಕೊಂಡು ಬರುವ ವಾಹನಗಳು ಹಾಗೂ ಈ ರಸ್ತೆಯ ಮೂಲಕ ಏರಿ ನಡೆದು ಬರುವ ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿದೆ.
ಇದರ ಜೊತೆಗೆ ಈಗ ಮಳೆಗಾಲವಾಗಿರುವುದರಿಂದ ಈ ರಸ್ತೆ ಇಳಿಜಾರು ಆಗಿರುವುದರಿಂದ ಈ ರಸ್ತೆಯಲ್ಲಿ ರೋಗಿಗಳು ದಿನನಿತ್ಯ ಬೀಳುವ ಪರಿಸ್ಥಿತಿ ಬಂದೊದಗಿದೆ. ಇನ್ನೊಂದು ಕಡೆ ವಯಸ್ಸಾದ ಗ್ರಾಮೀಣ ಪ್ರದೇಶದ ರೋಗಿಗಳು ಆಸ್ಪತ್ರೆಗೆ ಬರುವುದಕ್ಕೆ ಮತ್ತು ವಾಪಸ್ ತೆರಳುವುದಕ್ಕೆ ಜೀವ ಹಿಡಿದುಕೊಂಡೆ ಹೋಗುವ ಪರಿಸ್ಥಿತಿ ಇದಾಗಿದೆ.

ಕಳೆದ 1 ವರ್ಷದಿಂದ ಈ ಮುಖ್ಯ ಸಮಸ್ಯೆ ಇದ್ದರೂ ಸಹ ಇಲ್ಲಿನ ವೈದ್ಯರು, ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಭಿಯಂತರರು ತುಟಿಕ್ ಪಿಟಿಕ್ ಎಂದಿಲ್ಲಾ. ಆದ್ದರಿಂದ ಸ್ಥಳೀಯರ ಮನವಿ ಮೇರೆಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ಆರೋಗ್ಯ ಇಲಾಖೆ ಸಚಿವರ ಕಚೇರಿ ಹಾಗೂ ಉತ್ತರ ಕನ್ನಡ ಜಿಲ್ಲಾ ಆರೋಗ್ಯ ಅಧಿಕಾರಿಗಳು ಆದ ಡಾ.ನೀರಜ್ ಮತ್ತು ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆ ಇಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಆದ ಹರೀಶ್ ಅವರ ಗಮನಕ್ಕೆ ತೆಗೆದುಕೊಂಡು ಬಂದು ಕರೆ ಮೂಲಕ ಅಭಿಪ್ರಾಯ ಸಂಗ್ರಹ ಮಾಡಿ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದರೂ ಈ ಹದಗೆಟ್ಟ ಶಿರಸಿ ಸರ್ಕಾರಿ ರಸ್ತೆಗೆ ಕಾಯಕಲ್ಪ ಸಿಗುವುದೇ ಎಂಬುದನ್ನು ಕಾದುನೋಡಬೇಕಿದೆ.
ವರದಿ: ಬಸವರಾಜು




