Ad imageAd image

ರಾಷ್ಟ್ರಕೂಟರ ರಾಜಧಾನಿ ಮಳಖೇಡ ಕೋಟೆಯು ಭೂಕುಸಿತ.

Bharath Vaibhav
ರಾಷ್ಟ್ರಕೂಟರ ರಾಜಧಾನಿ ಮಳಖೇಡ ಕೋಟೆಯು ಭೂಕುಸಿತ.
WhatsApp Group Join Now
Telegram Group Join Now

ಸೇಡಂ:– ತಾಲೂಕಿನ ಮಳಖೇಡ ಗ್ರಾಮವು ಅಂದಿನ ರಾಷ್ಟ್ರಕೂಟರ ರಾಜಧಾನಿ ಆಗಿತ್ತು.ಅಮೋಘವರ್ಷ I (ನೃಪತುಂಗ ಅಮೋಘವರ್ಷ) ಆಳ್ವಿಕೆಯಲ್ಲಿ ರಾಷ್ಟ್ರಕೂಟರ ರಾಜಧಾನಿಯನ್ನು ಬೀದರ್ ಜಿಲ್ಲೆಯ ಮಯೂರಖಂಡಿಯಿಂದ ಮಾನ್ಯಖೇಟಕ್ಕೆ ಸ್ಥಳಾಂತರಿಸಿದಾಗ ಮಾನ್ಯಖೇಟವು 814 ರಿಂದ 968 AD ವರೆಗೆ ಪ್ರಾಮುಖ್ಯತೆಗೆ ಏರಿತು .
ಮಾನ್ಯಖೇಟವು ರಾಷ್ಟ್ರಕೂಟರ ಅವನತಿಯ ನಂತರ 1050 CE ವರೆಗೆ ಕಲ್ಯಾಣಿ ಚಾಲುಕ್ಯರು ಅಥವಾ ಪಶ್ಚಿಮ ಚಾಲುಕ್ಯರ ರಾಜಧಾನಿಯಾಗಿ ಸೇವೆ ಸಲ್ಲಿಸಿತು.

64 ವರ್ಷಗಳ ಕಾಲ ಆಳಿದ ಮತ್ತು ಕಲೆ ಮತ್ತು ಸಾಹಿತ್ಯದ ಮಹಾನ್ ಪೋಷಕನಾಗಿದ್ದ ರಾಜ ಅಮೋಘವರ್ಷ ತನ್ನ ರಾಜಧಾನಿ ಇಂದ್ರನ ಮಹಾ ಪೌರಾಣಿಕ ನಗರವಾದ ಇಂದ್ರಪ್ರಸ್ಥದಂತೆಯೇ ಇರಬೇಕೆಂದು ಬಯಸಿದನು.ಅಮೋಘವರ್ಷ I ಸರಿಸುಮಾರು 64 ವರ್ಷಗಳ ಕಾಲ ಆಳಿದನು ಮತ್ತು ಕನ್ನಡದ ಮೊದಲ ಶಾಸ್ತ್ರೀಯ ಕೃತಿಯಾದ ಕವಿರಾಜಮಾರ್ಗವನ್ನು ಬರೆದವರು.

ಅಂತಹ ಮಹತ್ವವುಳ್ಳ ಕೋಟೆಗೆ ಇಂದು ಭದ್ರತೆ ಎಂಬುದು ಇಲ್ಲದಂತಾಗಿದೆ.ಕೋಟೆ ಜೀರ್ಣೋದ್ಧಾರಕ್ಕೆ ಸರಕಾರವು ಅನುಧಾನ ಬಿಡುಗಡೆ ಮಾಡಿತ್ತು.ಅಭಿವೃದ್ಧಿ ಮಾಡಿದ ಕೇವಲ 8ತಿಂಗಳಲ್ಲಿ ಕೋಟೆ ಸ್ವಲ್ಪ ಮಳೆ ಬಂದ ಕೂಡಲೇ ಭೂಕುಸಿತಕ್ಕೆ ಒಳಗಾಗಿದೆ.ಇದೇ ರೀತಿ ಕೋಟೆಯನ್ನು ಕೈ ಬಿಟ್ಟರೆ ಸಂಪೂರ್ಣ ಭುಕುಸಿತಕ್ಕೆ ಒಳಗಾಗುವುದು ಖಂಡಿತ ಎಂಬುದು ಇಲ್ಲಿನ ಜನರ ಅಭಿಪ್ರಾಯ ಆಗಿದೆ.ಜಿಲ್ಲೆಯ ಇಬ್ಬರು ಸಚಿವರು ಇದಕ್ಕೆ ಯಾವ ರೀತಿಯ ಸ್ಪಂದನೆ ನೀಡುತ್ತಾರೆ ಎಂದು ಜನರು ಕಾದು ನೋಡಬೇಕಿದೆ.ಶೀಘ್ರದಲ್ಲೇ ಸಚಿವರು ಸ್ಪಂದನೆ ಸರಿಯಾದ ಕ್ರಮ ಕೈಗೊಳ್ಳುವಂತೆ ಜನರ ಮನವಿ ಆಗಿರುತ್ತದೆ.

ವರದಿ :-ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!