ಸೂರತ್: ವ್ಯಕ್ತಿಯೋರ್ವ ತನ್ನ ಇಬ್ಬರು ಗಂಡು ಮಕ್ಕಳನ್ನು ಕೊಂದು ನೇಣು ಹಾಕಿಕೊಂಡ ಘಟನೆ ನಡೆದಿದೆ. ‘ಆತ್ಮಹತ್ಯೆಗೆ ಪ್ರಚೋದನೆ’ ಆರೋಪದ ಮೇಲೆ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆ ಪತ್ರ, ವೀಡಿಯೊ ಸಂದೇಶಗಳು ಮತ್ತು ಎರಡು ಡೈರಿಗಳಲ್ಲಿನ ಉಲ್ಲೇಖಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಅದರಲ್ಲಿ ಅಲ್ಪೇಶ್ ಸೋಲಂಕಿ (41) ತನ್ನ ಪತ್ನಿಯ ವಿವಾಹೇತರ ಸಂಬಂಧವೇ ತನ್ನ ಆತ್ಮಹತ್ಯೆಗೆ ಕಾರಣ ಎಂದು ಹೇಳಿದ್ದಾರೆ.
ಮೃತರು ಜಿಲ್ಲಾ ಪಂಚಾಯತ್ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು, ಅಲ್ಲಿ ಗುರುವಾರ 2 ಮತ್ತು 8 ವರ್ಷದ ತಮ್ಮ ಗಂಡು ಮಕ್ಕಳಿಗೆ ಇಲಿಗೆ ಹಾಕುವ ವಿಷ ಬೆರೆಸಿದ ತಂಪು ಪಾನೀಯವನ್ನು ನೀಡಿ ಕೊಂದ ಮೇಲೆ ವ್ಯಕ್ತಿ ತಾನೂ ನೇಣು ಬಿಗಿದುಕೊಂಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ವಲಯ 4) ವಿಜಯಸಿಂಹ ಗುರ್ಜರ್ ಹೇಳಿದ್ದಾರೆ.




