ಚಾಮರಾಜನಗರ :ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ‘ಕರ್ನಾಟಕ ಪೊಲೀಸ್ ರನ್’ ಶೀರ್ಷಿಕೆಯಡಿ ನಡೆದ ಮ್ಯಾರಥಾನ್ ಓಟಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಚಾಲನೆ ನೀಡಿದರು…
ನಗರದ ಪೊಲೀಸ್ ಕವಾಯತು ಮೈದಾನದಿಂದ ಪ್ರಾರಂಭವಾಗಿ ರಾಮಸಮುದ್ರದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ತಲುಪಿ ಅಲ್ಲಿಂದ ಯೂಟರ್ನ್ ಪಡೆದು ಭುವನೇಶ್ವರಿ ವೃತ್ತ ತಲುಪಿ ವಾಪಸ್ ಪೊಲೀಸ್ ಕವಾಯತು ಮೈದಾನದಲ್ಲಿ ಅಂತ್ಯವಾಯಿತು.
ಮ್ಯಾರಥಾನ್‍ನಲ್ಲಿ ಭಾಗವಹಿಸಿ ಮೊದಲು ಬಂದ 50 ಜನರಿಗೆ ಪದಕಗಳನ್ನು ವಿತರಿಸಲಾಯಿತು .
ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ,ಎಲ್ಲರೂ ಆರೋಗ್ಯ ವಂತರಾಗಿದ್ದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ದೈಹಿಕ, ಮಾನಸಿಕವಾಗಿ ಆರೋಗ್ಯ ವಂತರಾಗಿದ್ದರೆ ಒಳ್ಳೆಯ ಕೆಲಸ ಮಾಡಬಹುದು.8 ವರ್ಷದಿಂದ 80 ವರ್ಷದ ವರೆಗೂ ಆರೋಗ್ಯ ಅವಶ್ಯಕ ವಾಗಿದೆ. ಜಿಲ್ಲಾ ಪೋಲಿಸ್ ಇಲಾಖೆ ನಮ್ಮ ಪೊಲೀಸ್, ನಮ್ಮಹೆಮ್ಮೆ ಶೀರ್ಷಿಕೆ ಯಡಿಯಲ್ಲಿ ಮ್ಯಾರಥಾನ್ ಓಟ ಅಯೋಜನೆ ಮಾಡಿರುವುದು ತುಂಬಾ ಖುಷಿ ತಂದಿದೆ ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಎಂದು ಪೊಲೀಸ್ ಇಲಾಖೆಯನ್ನು ಅಭಿನಂದಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ ಕವಿತಾ ಮಾತನಾಡಿ ಫಿಟ್ನೆಸ್ ಫಾರ್ ಆಲ್, ಡ್ರಗ್ಸ್ ಪ್ರೀ ಕರ್ನಾಟಕ ಘೋಷವಾಕ್ಯದೊಂದಿಗೆ ನಮ್ಮ ಪೊಲೀಸ್, ನಮ್ಮ ಹೆಮ್ಮೆ ಶೀರ್ಷಿಕೆಯಡಿಯಲ್ಲಿ ಮ್ಯಾರಥಾನ್ ಓಟ ಹಮ್ಮಿಕೊಳ್ಳಲಾಗಿದೆ. ಇದರ ಉದ್ದೇಶ ಪೊಲೀಸರು, ಸಾರ್ವಜನಿಕರ ಒಡನಾಟ ಹೆಚ್ಚಾಗಬೇಕು. ಜನಸ್ನೇಹಿ ಪೊಲೀಸ್ ಆಗಬೇಕೆಂಬ ಇಲಾಖೆ ಯ ಆಶಯದಂತೆ ಆ ನಿಟ್ಟಿನಲ್ಲಿ ರಾಜ್ಯಾದ್ಯಂತ ಕಾರ್ಯಕ್ರಮ ನಡೆಯುತ್ತಿದ್ದು, ಅದರಂತೆ ಜಿಲ್ಲೆಯಲ್ಲೂ ಮ್ಯಾರಥಾನ್ ಓಟ ಹಮ್ಮಿಕೊಂಡಿದಿದ್ದು ಸುಮಾರು 2 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿ ಯಶಸ್ವಿ ಗೊಳಿಸಿದ್ದಾರೆ ಎಂದರು. ಕಾರ್ಯಕ್ರಮ ದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಡಾ.ರೇಣುಕಾದೇವಿ, ಎಡಿಸಿ ಗೀತಾಹುಡೇದ, ವ್ಯದ್ಯಾಧಿಕಾರಿ ಡಾ.ಮಹೇಶ್, ಡಿವೈಎಸ್ ಪಿಗಳಾದ ಲಕ್ಷ್ಮಯ್ಯ, ಧರ್ಮೇಂದ್ರ ಇತರರು ಭಾಗವಹಿಸಿದ್ದರು.
ವರದಿ: ಸ್ವಾಮಿ ಬಳೇಪೇಟೆ




